ಹರ್ಯಾಣ,ಕಾಶ್ಮೀರದಲ್ಲಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01
ಹಿಸ್ಸಾರ್/ಶ್ರೀನಗರ್,ಸೆ.12- ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮುಂಜಾನೆ ಎರಡು ಪ್ರತ್ಯೇಕ ಭೂಕಂಪಗಳು ಸಂಭವಿಸಿದೆ. ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳಾಗಿಲ್ಲ.ಜಮ್ಮು-ಕಾಶ್ಮೀರದಲ್ಲಿ ಮುಂಜಾನೆ 5.15ರಲ್ಲಿ ಮೊದಲ ಭೂಕಂಪನ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಅದು 4.6ರಷ್ಟು ತೀವ್ರತೆ ಹೊಂದಿತ್ತು ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

ಹರ್ಯಾಣದಲ್ಲಿ ಮುಂಜಾನೆ 5.43ರಲ್ಲಿ ಭೂಕಂಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ಜಾಜರ್‍ನಲ್ಲಿ ಕಂಪಿಸಿದ ಭೂಮಿಯ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1ರಷ್ಟಿತ್ತು. ಈ ಎರಡೂ ಭೂಕಂಪ ಪ್ರಕರಣಗಳಲ್ಲಿ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

Facebook Comments

Sri Raghav

Admin