ಈಸ್ಟ್ ಸಂಡೇ ದಾಳಿಗೆ ಹಿಂದಿನ ಸರ್ಕಾರ ಕಾರಣ : ರಾಜಪಕ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ,ನ.25- ಹನ್ನೊಂದು ಭಾರತೀಯರೂ ಸೇರಿದಂತೆ 270ಕ್ಕೂ ಅಧಿಕ ಮಂದಿ ಮರಣಿಸಲು ಕಾರಣವಾದ 2019ರ ಈಸ್ಟರ್ ಭಾನುವಾರದ ದಾಳಿ ತಡೆಗಟ್ಟಲು ಹಿಂದಿನ ಸರ್ಕಾರ ವಿಫಲವಾಗಿದ್ದು, ರಾಷ್ಟ್ರೀಯ ಭದ್ರತೆಯನ್ನು ನಾಶಮಾಡಿದೆ ಎಂದು ಶ್ರೀಲಂಕಾದ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಆರೋಪಿಸಿದ್ದಾರೆ.

ಐಸಿಸ್‍ಗೆ ಸಂಪರ್ಕಿತರಾದ ಸ್ಥಳೀಯ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ನ್ಯಾಷನಲ್ ಥಾವ್‍ಹೀದ್ ಜಮಾತ್ (ಎನ್‍ಟಿಜೆ)ಗೆ ಸೇರಿದ ಒಂಬತ್ತು ಆತ್ಮಾಹುತಿ ಬಾಂಬರ್‍ಗಳು 2019ರ ಈಸ್ಟರ್ ಸಂಡೇಯಂದು ಮೂರು ಚರ್ಚ್‍ಗಳು ಮತ್ತು ಮೂರು ಐಷಾರಾಮಿ ಹೋಟೆಲ್‍ಗಳ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ 270ಕ್ಕೂ ಅಧಿಕ ಜನರು ಸಾವಿಗೀಡಾಗಿ 500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಈ ಬಾಂಬ್‍ಗಳನ್ನು ಸೋಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಾ ಒತ್ತಡ ಹೇರುತ್ತಿರುವವರು ಒತ್ತಾಯ ಮಾಡುವಾಗ ಎಚ್ಚರಿಕೆಯಿಂದರಬೇಕು. ಅಗತ್ಯ ಬಿದ್ದಲ್ಲಿ ತಮ್ಮ ಸರ್ಕಾರ ಇಂಥ ಟೀಕಾಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ತಮ್ಮ ಸರ್ಕಾರ ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅವರು ಬುಧವಾರ ಇಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಪ್ರತಿಪಾದಿಸಿದರು.

Facebook Comments