ಲಡಾಖ್‍ನಲ್ಲಿ ಚೀನಾ ದುಸ್ಸಾಹಸ ಎದುರಿಸಲು ಭಾರತ ಸೇನೆ ಸನ್ನದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಲೇಹ್,ಸೆ.4- ಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿ ಪದೇ ಪದೇ ಅತಿಕ್ರಮಣ ಯತ್ನ ನಡೆಸುತ್ತಿರುವ ಚೀನಿ ಸೇನಾಪಡೆಗಳಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನಾ ಪಡೆಗಳು ಸಂಪೂರ್ಣ ಸಜ್ಜಾಗಿವೆ.

ಲಡಾಖ್‍ನ ಪ್ಯಾನ್ ಗಾಂಗ್ ಸರೋವರದ ದಕ್ಷಿಣ ಭಾಗದ ಪ್ರದೇಶಗಳನ್ನು ಅತಿಕ್ರಮಣ ಮಾಡಿಕೊಳ್ಳಲು ಯತ್ನಿಸಿದ್ದ ಚೀನಾದ ಪೀಪಲ್ಸ್ ಲಿಬರೇಷನ್‍ ಆರ್ಮಿ (ಪಿಎಲ್‍ಎ) ಸೈನಿಕರಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿ ಹಿಮ್ಮೆಟ್ಟಿ ಸಿದ ನಂತರಗಡಿ ಭಾಗ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ.

ಇಂಡೋ-ಚೀನಾಗಡಿ ಭಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಚೀನಾ ಮತ್ತೊಮ್ಮೆ ಉಲ್ಲಂಘಿಸಿ, ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಯತ್ನಿಸಿತ್ತು. ಚೀನಿ ಸೈನಿಕರ ಈ ದುಸ್ಸಾಹಸವನ್ನು ಭಾರತೀಯ ವೀರಯೋಧರು ಹಿಮ್ಮೆಟ್ಟಿಸಿ ಪಾರಮ್ಯ ಮೆರೆದರು.

ಈ ಘಟನೆ ನಂತರಗಡಿ ಭಾಗದಲ್ಲಿಚೀನಾ ಸೇನೆ ಮತ್ತು ಯುದ್ಧಾಸ್ತ್ರಗಳ ಜಮಾವಣೆ ಹೆಚ್ಚಾಗಿದ್ದು, ಭಾರತವೂಕೂಡತನ್ನ ಮೂರು ಸಶಸ್ತ್ರ ಸೇನಾ ಪಡೆಗಳನ್ನು ಯಾವುದೇ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರಿಸಿದೆ.  ಲಡಾಖ್‍ನಿಂದ ಈಶಾನ್ಯ ಪ್ರಾಂತ್ಯದಅರುಣಾಚಲ ಪ್ರದೇಶದವರೆಗೂಗಡಿ ಭಾಗದಲ್ಲಿ ಭಾರತೀಯ ಸೇನೆ ಚೀನಾ ಸೈನಿಕರಿಗೆ ತಿರುಗೇಟು ನೀಡಲು ಸರ್ವ ರೀತಿಯಲ್ಲಿಯೂ ಸಜ್ಜಾಗಿದ್ದಾರೆ.

ಈ ಮಧ್ಯೆ ನಿನ್ನೆ ಬೆಳಗ್ಗೆಯೇ ಲಡಾಕ್ ದೌಡಾಯಿಸಿರುವ ಭಾರತೀಯ ಭೂ ಸೇನಾ ಮುಖ್ಯಸ್ಥಜನರಲ್ ಮುಕುಂದ್ ಮನೋಹರ್ ನರವಣೆ ಇಂದು ಕೂಡ ಗೆಇ ಭಾಗದಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದರು. ಅಲ್ಲದೇ ಚೀನಾದ ಪಿಎಲ್‍ಎ ಸೈನಿಕರ ಮತ್ತೆ ಕ್ಯಾತೆ ತೆಗೆದರೆ ಕೈಗೊಳ್ಳಬೇಕಾದ ಶಸ್ತ್ರಾಸ್ತ್ರಕ್ರಮದ ಸಿದ್ದತೆಯನ್ನು ಸಹ ಅವಲೋಕಿಸಿದರು.

ಚೀನಾದ ಯಾವುದೇ ದುಸ್ಸಾಹಸ ಎದುರಿಸಲು ನಮ್ಮ ಮೂರು ಸಶಸ್ತ್ರ ಪಡೆಗಳು ಸರ್ವ ಸನ್ನದ್ಧವಾಗಿವೆ ಎಂದು ಈಗಾಗಲೇ ಮಹಾ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ.

Facebook Comments