ನಿಂತು ತಿಂದರೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು.

ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ ಊಟ ಮಾಡುವ ಸೊಗಸೇ ಬೇರೆ. ಈ ರೀತಿಯಾಗಿ ಊಟ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಆಯುರ್ವೇದವು ಹೇಳಿದೆ.

#ಜೀರ್ಣಕ್ರಿಯೆ ಮೇಲೆ ಭಂಗಿ ಪರಿಣಾಮ: ನೀವು ತಿನ್ನುವಂತಹ ಭಂಗಿಯು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಮಂದಿ ತಾವು ಮಲಗಿಕೊಂಡು ತಿನ್ನುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಆತ್ಮತೃಪ್ತಿ ಸಿಗುತ್ತದೆಯೇ ಹೊರತು, ದೇಹಕ್ಕೆ ಲಾಭವಿಲ್ಲ. ಇದರಿಂದ ಅಜೀರ್ಣ ಬರಬಹುದು. ಹಾಗೆ ಹೊಟ್ಟೆಉಬ್ಬರ ಮತ್ತು ಕಿರಿಕಿರಿ ಉಂಟಾಗಬಹುದು. ಮಹಿಳೆಯರ ಮೇಲೆ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮಲಗಿ ತಿನ್ನುವಂತಹ ಜನರಲ್ಲಿ ಸ್ವಲ್ಪ ಸಮಯದ ಬಳಿಕ ತೊಂದರೆ ಕಂಡುಬರುವುದು. ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಜೀರ್ಣಕ್ರಿಯೆಯು ತುಂಬಾ ನಿಧಾನವಾಗುವುದು.

#ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ? : ಮಲಗಿ ಅಥವಾ ಕುಳಿತುಕೊಂಡು ತಿನ್ನುವುದಕ್ಕೆ ಹೋಲಿಸಿದರೆ, ತಿಂದ ಬಳಿಕ ನಿಲ್ಲುವುದು ಮತ್ತು ನಡೆಯುವುದು ವೇಗದ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ ಎಂದು ಮತ್ತೊಂದು ಅಧ್ಯಯನವು ಹೇಳಿದೆ. ಅದಾಗ್ಯೂ, ಇದರಲ್ಲಿ ಅತೀ ಕೆಟ್ಟದು ಎಂದರೆ ಅದು ಮಲಗಿಕೊಂಡು ತಿನ್ನುವುದು. ತಿಂದ ಬಳಿಕ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಮತ್ತು ಇದರಿಂದ ಸುಮಾರು 50 ಕ್ಯಾಲರಿ ದಹಿಸಲು ನೆರವಾಗಿದೆ. ಇದು ದೀರ್ಘಕಾಲಕ್ಕೆ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಆದರೆ ಇಲ್ಲಿ ಹೇಗೆ ತಿನ್ನುತ್ತೀರಿ ಎನ್ನುವುದಕ್ಕಿಂತಲೂ ನೀವು ಏನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುವುದು.

#ನಿಂತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದೇ? : ನಿಂತುಕೊಂಡು ತಿಂದರೆ ಆಗ ಕ್ಯಾಲರಿ ದಹಿಸಬಹುದು ಎಂದು ಹೆಚ್ಚಿನವರು ಭಾವಿಸಿರಬಹುದು. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕಾರಿ ವಿಧಾನವೇ? ಖಂಡಿತವಾಗಿಯೂ ಇದು ಆರೋಗ್ಯಕಾರಿ ವಿಧಾನವಲ್ಲ. ನಿಂತುಕೊಂಡು ತಿಂದರೆ ಆಗ ತಿನ್ನುವ ವೇಗ ಅಧಿಕವಾಗುವುದು ಮತ್ತು ಸ್ವಲ್ಪ ಹೆಚ್ಚು ಆಹಾರ ಹೊಟ್ಟೆ ಸೇರುವುದು. ನೀವು ನಿಂತುಕೊಂಡು ಹೆಚ್ಚು ಆಹಾರ ತಿಂದರೆ ಆಗ ಅದಕ್ಕೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗದು.

#ಇದರಿಂದಾಗಿ ನಿಮಗೆ ಹಸಿವಾಗುತ್ತಿದೆಯಾ? :  ತೂಕ ಕಳೆದುಕೊಳ್ಳಲು ನೀವು ನಿಂತುಕೊಂಡು ತಿನ್ನುವ ವಿಧಾನ ಅನುಸರಿಸಿದರೆ, ಆಗ ಇದರಿಂದ ನಿಮಗೆ ಮತ್ತೆ ಹಸಿವಾಗುತ್ತದೆಯಾ ಎನ್ನುವ ಪ್ರಶ್ನೆ ಬರುವುದು. ಊಟದ ಬಳಿಕ ನಡೆದರೆ ಆಗ ಜೀರ್ಣಕ್ರಿಯೆಯು ಹೆಚ್ಚಾಗುವುದು. ಇದರಿಂದ ಹಸಿವಿನ ಭಾವನೆ ಬರುವುದು. ಆದರೆ ನಿಂತುಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗದು. ಇದರಿಂದ ನೀವು ಕುಳಿತುಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗುವುದು.

#ಎಚ್ಚರ..! : ನಿಂತುಕೊಂಡು ತಿಂದರೆ ಅದರಿಂದ ಕ್ಯಾಲರಿ ದಹಿಸಬಹುದು ಎಂದು ಕೆಲವೊಂದು ಸಂದರ್ಭದಲ್ಲಿ ಸಾಬೀತು ಆಗಿದೆ. ಆದರೆ ನಿಂತುಕೊಂಡು ತಿನ್ನುವುದು ದೀರ್ಘಕಾಲಕ್ಕೆ ಒಳ್ಳೆಯ ಅಭ್ಯಾಸವಲ್ಲ. ನಿಂತುಕೊಂಡು ತಿಂದರೆ ಆಗ ಅತಿಯಾಗಿ ತಿನ್ನಬಹುದು ಮತ್ತು ಹೊಟ್ಟೆ ಉಬ್ಬರ ಬರಬಹುದು. ಕೆಲವೊಂದು ಪ್ರಕರಣದಲ್ಲಿ ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸುವುದು. ಆದರೆ ಆಹಾರ ಸೇವಿಸಲು ಇದು ಸರಿಯಾದ ಕ್ರಮವಲ್ಲ.

ಇದರಿಂದ ನೆಲದ ಮೇಲೆ ಕುಳಿತುಕೊಂಡು, ಆರಾಮವಾಗಿ ತಿನ್ನಬೇಕು. ಇದರಿಂದ ಮನಸ್ಸಿಗೂ ಖುಷಿ ಸಿಗುವುದು ಮತ್ತು ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಇದು ಸಹಕಾರಿ ಆಗಲಿದೆ.

Facebook Comments