ಪಂಜಾಬ್‍ ಚುನಾವಣಾ ದಿನಾಂಕ ಬದಲಾವಣೆ ಮಾಡಿದ ಆಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.17- ಹಲವು ಪಕ್ಷಗಳ ಬೇಡಿಕೆಯಂತೆ ಪಂಜಾಬ್ ವಿಧಾನಸಭೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬದಲಾವಣೆ ಮಾಡಿದೆ. ಪಂಜಾಬ್‍ ವಿಧಾನಸಭೆಯ ಚುನಾವಣೆಯನ್ನು ಮುಂದೂಡುವಂತೆ ಅಲ್ಲಿನ ಮುಖ್ಯಮಂತ್ರಿ ಚರಣ್ ಜಿತ್‍ ಸಿಂಗ್ ಬರೆದಿರುವ ಪತ್ರ ಆಧರಿಸಿ ಇಂದು ಕೇಂದ್ರ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿತ್ತು. ಬಳಿಕ ತನ್ನ ನಿರ್ಧಾರ ತಿಳಿಸಿರುವ ಆಯೋಗ ಫೆಬ್ರವರಿ 14ರ ಬದಲಿಗೆ 20ನೇ ತಾರೀಖಿನಂದ ಮತದಾನ ನಡೆಸುವುದಾಗಿ ಘೋಷಿಸಿದೆ.

ಫೆಬ್ರವರಿ 16ರಂದು ಗುರು ರವಿದಾಸ್ ಅವರ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಲಿತರು ಫೆಬ್ರವರಿ 10ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಶೇ.32ರಷ್ಟಿರುವ ದಲಿತ ಸಮುದಾಯದ ಗೈರು ಹಾಜರಿಯಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ.

ಹಾಗಾಗಿ ಮತದಾನಕ್ಕೆ ಫೆಬ್ರವರಿ 14ರ ಬದಲಾಗಿ ಬೇರೆ ದಿನ ನಿಗದಿ ಮಾಡಬೇಕು ಎಂದು ಪತ್ರದಲ್ಲಿ ಚರಣ್ ಜಿತ್‍ ಸಿಂಗ್ ಮನವಿ ಮಾಡಿದ್ದರು. ತಮ್ಮ ಅಭಿಪ್ರಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ಇದೆ ಎಂದು ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇಂದು ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿತ್ತು.

Facebook Comments