7ನೇ ಆರ್ಥಿಕ ಗಣತಿಗೆ ಸಿಎಂ ಯಡಿಯೂರಪ್ಪ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6-ರಾಜ್ಯ ಮತ್ತು ದೇಶದ ಆರ್ಥಿಕ ಸ್ಥಿತಿಗತಿಯ ವಾಸ್ತವ ಅರಿಯಲು ಹಾಗೂ ಸರ್ಕಾರದ ಯೋಜನೆ, ಕಾರ್ಯಕ್ರಮ ಅನುಷ್ಠಾನಕ್ಕೆ ಆರ್ಥಿಕ ಗಣತಿ ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.  ಭಾರತದ ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖಿಕ ಇಲಾಖೆಯ 7ನೇ ಆರ್ಥಿಕ ಗಣತಿಗೆ ಚಾಲನೆ ನೀಡಿ ಮಾತನಾಡಿದರು.

ಆರ್ಥಿಕ ಗಣತಿಯಿಂದ ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ- ಫಲಿತಾಂಶವೇ ಸಹಕಾರಿಯಾಗಲಿದೆ. ಪ್ರಥಮ ಬಾರಿಗೆ 7ನೇ ಆರ್ಥಿಕ ಗಣತಿಯ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸುತ್ತಿರುವುದು ಪ್ರಶಂಸನೀಯವಾಗಿದೆ.  ಇದರಿಂದ ಮಾಹಿತಿಯನ್ನು ಶೀಘ್ರವಾಗಿ ಸಂಗ್ರಹಿಸಿ ವರದಿ ತಯಾರಿಸಲು ಅನುಕೂಲವಾಗುತ್ತದೆ. ಈ ಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ ಎಂದರು.

ಆರ್ಥಿಕ ಗಣತಿಯಿಂದ ರಾಜ್ಯದ ವಿವಿಧ ಪ್ರದೇಶ ಹಾಗೂ ವಲಯಗಳಲ್ಲಿ ಉದ್ಯಮಗಳು ಯಾವ ರೀತಿ ಆರ್ಥಿಕ ಚಟುವಟಿಕೆ ಕೈಗೊಳ್ಳುತ್ತವೆ ಎಂಬ ವಿವರ ದೊರೆಯುತ್ತದೆ. ಅದನ್ನು ಆಧರಿಸಿ ನೀತಿ ನಿರೂಪಣೆ ರಚಿಸಲು ಸಹಕಾರಿಯಾಗಲಿದೆ. ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುವಾಗ ಜನರ ಮನವೊಲಿಸಿ ನಿಖರ ಮಾಹಿತಿ ಸಂಗ್ರಹಿಸಬೇಕು. ಗಣತಿದಾರರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ರಾಜ್ಯದೆಲ್ಲೆಡೆ ಆರ್ಥಿಕ ಗಣತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದುö, ಈ ಗಣತಿ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಕೋರಿದರು.  ಇದೇ ಸಂದರ್ಭದಲ್ಲಿ ದವಳಗಿರಿ ನಿವಾಸವನ್ನು ದಾಖಲಿಸುವ ಮೂಲಕ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್ ಮಾತನಾಡಿ, ಆರ್ಥಿಕ ಗಣತಿಯಿಂದ ದೊರೆಯುವ ಅಂಕಿಅAಶಗಳು ರಾಜ್ಯದ ಯೋಜನೆ ರೂಪಿಸಲು ಸಹಕಾರಿಯಾಗಲಿವೆ. ಹೀಗಾಗಿ ಎಲ್ಲಾ ಇಲಾಖೆಗಳು ಗಣತಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.  ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಲ ಮಾತನಾಡಿ, 7ನೇ ಆರ್ಥಿಕ ಗಣತಿಯು ನ.15ರಿಂದ 2020ರ ಮಾರ್ಚ್ವರೆಗಿನ ಅವಧಿಯಲ್ಲಿ ನಡೆಯುತ್ತದೆ. ನಗರ ಪ್ರದೇಶದಲ್ಲಿ 54, 96,473, ಗ್ರಾಮೀಣ ಪ್ರದೇಶದಲ್ಲಿ 82,24,143 ಕುಟುಂಬಗಳನ್ನು ಭೇಟಿ ಮಾಡಲಾಗುತ್ತದೆ. ಮಾಹಿತಿ ಕಲೆ ಹಾಕಲಾಗುತ್ತದೆ. ಇದಕ್ಕಾಗಿ ನಗರ ಪ್ರದೇಶದಲ್ಲಿ 87,020, ಗ್ರಾಮೀಣ ಪ್ರದೇಶದಲ್ಲಿ 30,105 ಗಣತಿದಾರರು ಮತ್ತು ಮೇಲ್ವಿಚಾರಕರ ಅಗತ್ಯವಿದೆ.

2ನೇ ಹಂತದ ಮೇಲ್ವಿಚಾರಣೆಯನ್ನು ಕೇಂದ್ರ ಸಾಂಖಿಕ ಕಚೇರಿಯ 70 ಅಧಿಕಾರಿಗಳು ಮತ್ತು ನೌಕರರು ರಾಜ್ಯದ ಸಾಂಖಿಕ ಕಚೇರಿಯ 200 ಅಧಿಕಾರಿಗಳು ಮತ್ತು ನೌಕರರು ಕೈಗೊಳ್ಳಲಿದ್ದಾರೆ.  ಮಾಹಿತಿ ಸಂಗ್ರಹಿಸಲು ಕಾಮನ್ ಸರ್ವೀಸ್ ಸೆಂಟರ್ ಕಾರ್ಯ ನಿರ್ವಹಿಸಲಾಗುತ್ತಿದೆ. ಈಗಾಗಲೇ ಎಲ್ಲಾ ರಾಜ್ಯ ರಾಷ್ಟçಮಟ್ಟದಲ್ಲಿ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ.

ಇವರು ಸಂಗ್ರಹಿಸಿದ ಮಾಹಿತಿಯನ್ನು ರಾಜ್ಯ ಸೂಚಿಸುವ ವಿವಿಧ ನೀತಿ, ಯೋಜನೆಗಳಿಗೆ ಬಳಸಲಾಗುತ್ತದೆ. ಸಂಘಟಿತ, ಅಸಂಘಟಿತ ವಲಯಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಉದ್ದಿಮೆಗಳನ್ನು ಪಟ್ಟಿ ಮಾಡುವುದು, ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವಿವರ ಸಂಗ್ರಹಿಸುವುದು ಗಣತಿಯ ಉದ್ದೇಶ ಎಂದರು.

Facebook Comments