ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಐಎಂಎಫ್ ಎಚ್ಚರಿಕೆ ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.9-ಜಾಗತಿಕ ಆರ್ಥಿಕತೆಯು ಏಕಕಾಲದಲ್ಲಿ ಹಿಂಜರಿತಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಇಂಟರ್‍ನ್ಯಾಷನಲ್ ಮಾನಿಟರಿ ಫಂಡ್-ಐಎಂಎಫ್)ಯ ನೂತನ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜೀವಾ, ತತ್ಪರಿಣಾಮವಾಗಿ ಈ ವರ್ಷ ವಿಶ್ವದಲ್ಲಿ ಶೇ.90ರಷ್ಟು ಬೆಳವಣಿಗೆ ನಿಧಾನವಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮಗಳು ಭಾರತದಂಥ ಹೊರ ಹೊಮ್ಮುತ್ತಿರುವ ಬೃಹತ್ ಮಾರುಕಟ್ಟೆ ಆರ್ಥಿಕತೆಯ ಕೆಲವು ರಾಷ್ಟ್ರಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಎಚ್ಚರಿಕೆ ರೂಪದಲ್ಲಿ ತಿಳಿಸಿದ್ದಾರೆ.  ವ್ಯಾಪಕ ಮಂದಗತಿಯು ಈ ವರ್ಷದ ಬೆಳವಣಿಗೆಯನ್ನು ನಿಧಾನಗೊಳಿಸಿದೆ.

ಇದರಿಂದ ಇದು ಈ ದಶಕದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನಿಧಾನ ಚಲನೆಯಾಗಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ವಿಷಾಧಿಸಿದ್ದಾರೆ.  ಮುಂದಿನ ವಾರ ವಿಶ್ವ ಆರ್ಥಿಕ ಮುನ್ನೋಟ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಅದರಲ್ಲಿನ ಅಂಶಗಳಲ್ಲಿ ಕೆಲವನ್ನು ತೆರೆ ಸರಿಸುವಿಕೆಯಲ್ಲಿ ಅವರು ಬಹಿರಂಗಗೊಳಿಸಿದ್ದಾರೆ. 2019 ಮತ್ತು 2020ರ ಇಳಿಮುಖ ಪುನರಾವರ್ತನೆಗಳು ಇದರಲ್ಲಿ ಎದ್ದು ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ.

2019ರಲ್ಲಿ ವಿಶ್ವದಲ್ಲಿ ಆರ್ಥಿಕ ಮಂದಗತಿಯು ಶೇಕಡ 90ರಷ್ಟು ಇರುತ್ತದೆ ಎಂಬುದನ್ನು ನಾವು ನೀರಿಕ್ಷಿಸಿದ್ದೇವೆ. ಜಾಗತಿಕ ಆರ್ಥಿಕತೆ ಹಿಂದೆಂದಿಗಿಂತಲೂ ಏಕಕಾಲದಲ್ಲಿ ಕುಂಠಿತವಾಗಿದೆ. ಎಂದು ಹೇಳಿದ್ದಾರೆ. ಐಎಂಎಫ್ ಮತ್ತು ವಿಶ್ವ ಬ್ಯಾಂಕ್‍ಗಳ ವಾರ್ಷಿಕ ಸಭೆ ಮುಂದಿನ ವಾರ ವಾಷಿಂಗ್ಟನ್‍ನಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವವಾಗಿ ಅವರು ತಮ್ಮ ಕರ್ಟನ್ ರೈಸರ್ ಭಾಷಣದಲ್ಲಿ ಪ್ರಸ್ತುತ ಆರ್ಥಿಕ ಸ್ಥಿತಿ-ಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

Facebook Comments