ವಿಶ್ವದಾಖಲೆಯಾಯ್ತು 5 ಲಕ್ಷ ಗುಲಾಬಿಗಳಿಂದ ಸೃಷ್ಟಿಯಾದ 30 ಟನ್ನು ತೂಕದ ಪಿರಮಿಡ್..!

ಈ ಸುದ್ದಿಯನ್ನು ಶೇರ್ ಮಾಡಿ

ds
ಈ ವಿಸ್ಮಯ ವಿಶ್ವದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಲು ಏನೆಲ್ಲಾ ಕಸರತ್ತುಗಳು ನಡೆಯುತ್ತವೆ ಅಲ್ಲವೇ..? ಈಕ್ವೆಡಾರ್‍ನಲ್ಲಿ ಗುಲಾಬಿ ಹೂವುಗಳಿಂದಲೇ ನಿರ್ಮಿಸಲಾದ ಬೃಹತ್ ರೋಸ್ ಪಿರಮಿಡ್ ಈಗ ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸಿದೆ…  ಈಕ್ಚೆಡಾರ್‍ನ ಪೆಡ್ರೊ ಮೊಂಟಾಯ ನಗರದಲ್ಲಿ ಹೊಸ ಗಿನ್ನಿಸ್ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ. ಅಂಡಿಯನ್ ದೇಶದ ಪರ್ವತಗಳಲ್ಲಿ ಬೆಳೆಯುವ ಐದು ಲಕ್ಷಕ್ಕೂ ಅಧಿಕ ಬಣ್ಣ ಬಣ್ಣದ ಹೂವುಗಳಿಂದ ರೋಸ್ ಪಿರಮಿಡ್‍ನನ್ನು ಸೃಷ್ಟಿಸಲಾಗಿದೆ.

ಕ್ಚಿಟೋ ಪ್ರದೇಶದ ಉತ್ತರ ದಿಕ್ಕಿನಲ್ಲಿರುವ ಕೊಚಾಸ್‍ಕ್ವೀ ಪುರಾತತ್ವ ಉದ್ಯಾನದಲ್ಲಿರುವ ಪ್ರಾಚೀನ ಪಿರಮಿಡ್ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ. 3,608 ಚದರ ಅಡಿಗಳ ಈ ಪಿರಮಿಡ್ 30 ಟನ್ನುಗಳಷ್ಟು ತೂಕವಿದೆ. ವಿಶ್ವದ ಅತ್ಯಂತ ಬೃಹತ್ ಪುಷ್ಪ ವಿನ್ಯಾಸ ಎಂಬ ಹೆಗ್ಗಳಿಕೆಯೊಂದಿಗೆ ಇದು ವಿಶ್ವ ದಾಖಲೆ ನಿರ್ಮಿಸಿದೆ.

ds-1

ಜುಲೈ 9ರಿಂದ ಕಾರ್ಯಕರ್ತರ ತಂಡವೊಂದು ದಿನದ 24 ತಾಸುಗಳ ಕಾಲ ಶಿಫ್ಟ್‍ಗಳಲ್ಲಿ ಕೆಲಸ ಮಾಡಿ ಈ ಅಪೂರ್ವ ವಿನ್ಯಾಸ ಸೃಷ್ಟಿಸಿದ್ದಾರೆ.  ಪ್ರತಿಯೊಂದು ಗುಲಾಬಿ ಪುಷ್ಪವನ್ನು ಅತ್ಯಂತ ಕಲಾತ್ಮಕವಾಗಿ ಜೋಡಿಸಲಾಗಿದೆ ಎಂದು ವಿವರಿಸುತ್ತಾರೆ ಪ್ರಾಜೆಕ್ಟ್ ಡಿಸೈನರ್ ರೋಸಾ ಸಿಸ್‍ನೆರೊಸ್.  150 ಹಸಿರು ಮನೆಗಳಿಂದ ಟ್ರಕ್‍ಗಳ ಮೂಲಕ ಉಗ್ರಾಣಕ್ಕೆ 5 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ಸಾಗಿಸಲಾಯಿತು. ನಂತರ ಸಂಗ್ರಹ ಉಗ್ರಾಣದಲ್ಲಿ ಕಾರ್ಯಕರ್ತರು ಗುಲಾಬಿ ಕಾಂಡಗಳು ಮತ್ತು ಎಲೆಗಳನ್ನು ಕತ್ತರಿಸಿ ಒಪ್ಪ-ಒರಣ ಮಾಡಿ ಪೆಟ್ಟಿಗೆಗಳಲ್ಲಿ ಜೋಡಿಸಿ ಅವುಗಳನ್ನು ಪಿರಮಿಡ್ ನಿರ್ಮಾಣ ಸ್ಥಳಕ್ಕೆ ಸ್ಥಳಾಂತರಿಸಿದರು. ನಂತರ ತುಂತುರು ನೀರಾವರಿ ಮೂಲಕ ಗುಲಾಬಿ ಹೂವುಗಳನ್ನು ತಾಜಾತನದಿಂದ ಇಡಲಾಯಿತು.
ಈ ಗುಲಾಬಿ ಹೂವುಗಳಿಗಾಗಿ ಸಂಘಟಕರು 500 ಸಹಸ್ರ ಡಾಲರ್‍ಗಳನ್ನು ಖರ್ಚು ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin