“ನನಗೆ ಕೇಸರಿ ಬಣ್ಣ ಬಳಿಯುವ ಯತ್ನ ನಡೆದಿದೆ” : ರಜನಿಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ನ.8- ಬಿಜೆಪಿ ಸೇರಲು ಆ ಪಕ್ಷದ ನಾಯಕರಿಂದ ನನಗೆ ಯಾವುದೇ ಆಮಂತ್ರಣ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಹಿರಿಯ ಚಿತ್ರನಟ ರಜನಿಕಾಂತ್, ತಮಗೆ ಕೇಸರಿ ಬಣ್ಣ (ಬಿಜೆಪಿ ಪರ ಒಲವು ಹೊಂದಿರುವ ವ್ಯಕ್ತಿಯನ್ನಾಗಿ ಬಿಂಬಿಸಲು) ಬಳಿಯಲು ಯತ್ನಗಳು ಮುಂದುವರೆದಿವೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಸಂತ-ಕವಿ ತಿರುವಳ್ಳುವರ್ ಅವರಿಗೂ ಸಹ ಕೇಸರಿ ಬಣ್ಣ ಬಳಿಯುವ ಯತ್ನವನ್ನು ಬಿಜೆಪಿಯವರು ಮುಂದುವರೆಸುತ್ತಿದ್ದಾರೆ ಎಂದು ರಜಿನಿಕಾಂತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಮಿಳುನಾಡಿನ ಹಿರಿಯ ಬಿಜೆಪಿ ಮುಖಂಡ ಪೋನ್ ರಾಧಾಕೃಷ್ಣನ್ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ ವಿಷಯದ ಬಗ್ಗೆ ಸಂದರ್ಶಕ ರಜನಿ ಅವರನ್ನು ಕೇಳಿದಾಗ ಇದು ಸೌಹಾರ್ದಯುತ ಭೇಟಿಯಾಗಿತ್ತು. ಅವರು ಬಿಜೆಪಿ ಸೇರಲು ನನಗೆ ಯಾವುದೇ ಆಮಂತ್ರಣ ನೀಡಿಲ್ಲ. ಇದು ಸತ್ಯ. ಆದರೆ, ನನಗೆ ಕೇಸರಿ ಬಣ್ಣ ಬಳಿಯುವ ಯತ್ನಗಳು ಮುಂದುವರೆದಿರುವುದಂತು ನಿಜ ಎಂದು ರಜನಿ ನಗುತ್ತಾ ತಿಳಿಸಿದ್ದಾರೆ.

ನಾನು ಈಗ ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ತಿರುವಳ್ಳುವರ್ ಅವರಿಗೂ ಸಹ ಕೇಸರಿ ಬಣ್ಣ ಬಳಿಯುವ ಯತ್ನ ನಡೆದಿದೆ ಎಂದು ರಜನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಮ್ಮ ಮುಂದಿನ ನಿರ್ಧಾರ ಏನು ಎಂಬ ಬಗ್ಗೆ ಸಮಯ ಬಂದಾಗ ನಾನೇ ನಿಮಗೆ ತಿಳಿಸುತ್ತೇನೆ ಎಂದು ತಲೈವ ಹೇಳಿದ್ದಾರೆ.

Facebook Comments

Sri Raghav

Admin