ನಟ ದಿಲೀಪ್‍ಕುಮಾರ್ ಅವರ ಮತ್ತೊಬ್ಬ ಸಹೋದರ ಕೊರೊನಾಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.3- ಕೊರೊನಾದಿಂದಾಗಿ ಬಳಲುತ್ತಿದ್ದ ಬಾಲಿವುಡ್‍ನ ಖ್ಯಾತ ನಟ ದಿಲೀಪ್‍ಕುಮಾರ್‍ರ ಸಹೋದರ ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ದಿಲೀಪ್‍ಕುಮಾರ್‍ರ ಸೋದರ ಎಹೆಸಾನ್ (90) ಮೃತಪಟ್ಟ ದುರ್ದೈವಿ.

ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಹಾಗೂ ಮರೆಗುಳಿತದಿಂದ ಬಳಲುತ್ತಿದ್ದ ಎಹೆಸಾನ್‍ಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇತ್ತೀಚೆಗೆ ದಿಲೀಪ್‍ಕುಮಾರ್‍ರ ಮತ್ತೊಬ್ಬ ಸಹೋದರ ಅಸ್ಲಾಂಖಾನ್ ಕೂಡ ಕೊರೊನಾದಿಂದಲೇ ಸಾವನ್ನಪ್ಪಿದ್ದರು.

ಆಗಸ್ಟ್ 15 ರಂದು ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಲೀಪ್‍ಕುಮಾರ್‍ರ ಸಹೋದರರಾದ ಅಸ್ಲಾಂಖಾನ್ ಹಾಗೂ ಎಹೆಸಾನ್‍ರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದು ಆಗಸ್ಟ್ 21 ರಂದು ಅಸ್ಲಾಂ ನಿಧನರಾಗಿದ್ದಾರೆ, ಎಹೆಸಾನ್ ಇಂದು ಮೃತಪಟ್ಟಿದ್ದಾರೆ.

Facebook Comments