ಈದ್ ಮಿಲಾದ್ ಹಿನ್ನೆಲೆಯಲ್ಲಿ 19ರಂದು ಸಾರ್ವತ್ರಿಕ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆಯನ್ನು ಅಕ್ಟೋಬರ್ 19ರಂದು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂನ್ ಕಮಿಟಿಯು ಈದ್ ಮಿಲಾದ್ ಹಬ್ಬವನ್ನು ಅಕ್ಟೋಬರ್ 19ರಂದು ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಜೆ ಘೋಷಿಸಿದೆ.

ಕಳೆದ 2020ರ ನವೆಂಬರ್ 21ರಂದು ಪ್ರಕಟಿಸಿದ ಸಾರ್ವತ್ರಿಕ ರಜೆ ಪ್ರಕಾರ ಅ.20ರಂದು ಈದ್ ಮಿಲಾದ್ ಹಬ್ಬದ ರಜೆಯನ್ನು ಘೋಷಿಸಲಾಗಿತ್ತು. ಹೀಗಾಗಿ ರಜಾ ದಿನಾಂಕವನ್ನು ಸರ್ಕಾರ ಬದಲಿಸಿ ಆದೇಶಿಸಿದೆ.

Facebook Comments