ನಾಳೆಯಿಂದ ಅ.17ರವರೆಗೆ 8 ದಿನ ದಸರಾ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.9- ರಾಜ್ಯದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ನಾಳೆಯಿಂದ ಅ.17ರವರೆಗೆ ಎಂಟು ದಿನಗಳ ಕಾಲ ದಸರಾ ರಜೆ ಘೋಷಿಸಲಾಗಿದೆ. ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ 2021-22ನೇ ಸಾಲಿಗೆ ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿತ್ತು. ಇದೀಗ ದಸರಾ ರಜೆಯನ್ನು ಘೋಷಿಸಲಾಗಿದೆ.

ಉಪನ್ಯಾಸಕರ ಸಂಘದ ಕೋರಿಕೆ ಹಿನ್ನೆಲೆಯಲ್ಲಿ ದಸರಾ ರಜ ಅವಯನ್ನು ಮಾರ್ಪಾಡು ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕೂಡ ಅ.10ರಿಂದ 20ರವರೆಗೆ ರಜೆ ಘೋಷಿಸಲಾಗಿದೆ.

Facebook Comments