10 ವರ್ಷದ ಸಾಹಸಿ ಬಾಲಕಿಯ ಶಿಖರಾರೋಹಣ

ಈ ಸುದ್ದಿಯನ್ನು ಶೇರ್ ಮಾಡಿ

ಅಮೆರಿಕದ ಸಾಹಸಿ ಬಾಲೆಯೊಬ್ಬಳು ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾಳೆ. 10 ವರ್ಷದ ಶಾಲಾ ಬಾಲಕಿ ಕ್ಯಾಲಿ ಪೋರ್ನಿಯಾದ ಅತ್ಯಂತ ಎತ್ತರದ ಶಿಖರಾರೋಹಣ ಮಾಡಿ ಜಗದ ಗಮನ ಸೆಳೆದಳು. ಸಾಹಸ-ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಅಮೆರಿಕದ 10 ವರ್ಷದ ಶಾಲಾ ಬಾಲಕಿ ಸಲೇಹ್ ಶನೀಟರ್ ಸಾಬೀತು ಮಾಡಿದ್ದಾಳೆ.

ಕ್ಯಾಲಿಪೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಎಲ್ ಕ್ಯಾಪಿಟನ್ ಎಂಬ ಬೃಹತ್ ಶಿಖರವನ್ನು ಯಶಸ್ವಿಯಾಗಿ ಆರೋಹಣ ಮಾಡಿ ಈ ದಾಖಲೆ ನಿರ್ಮಿಸಿದ್ದಾಳೆ. ದಿ ನೋಸ್ ಎಂಬ ಹೆಸರಿನ ಈ ಬೃಹತ್ ಪರ್ವತವನ್ನು ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕಿ ಎಂಬ ಕೀರ್ತಿಗೆ ಸಲೇಹ್ ಪಾತ್ರಳಾಗಿದ್ದಾಳೆ.

2,300 ಮೀಟರ್‍ಗಳಷ್ಟು ಎತ್ತರದ ಈ ಶಿಖರವನ್ನೇರಲು ಈ ಬಾಲಕಿಗೆ ಐದು ದಿನಗಳು ಬೇಕಾಯಿತು. ಈ ಸಾಹಸಕ್ಕೆ ಆಕೆಯ ತಂದೆ ಮೈಕ್ ಶನೀಟರ್ ಮತ್ತು ಆಪ್ತ ಹಿತೈಷಿ ಮೈಕ್ ರಿಗೀರ್ ಸಾಥ್ ನೀಡಿದರು.

10 ವರ್ಷದ ಸಲೇಹ್ ಅತ್ಯಂತ ಆತ್ಮವಿಶ್ವಾಸದಿಂದ ಪರ್ವತಾರೋಣ ಮಾಡುತ್ತಿರುವ, ಹಗ್ಗದಲ್ಲಿ ನೇತಾಡುತ್ತಾ ಬೃಹತ್ ಬಂಡೆ ಏರಲು ಶ್ರಮಿಸುತ್ತಿರುವ ದೃಶ್ಯಗಳನ್ನು ತಂದೆ ಮೈಕ್, ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ

Facebook Comments