ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ವೀಕ್ಷಕರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ಉಪ ಚುನಾವಣೆ ನಡೆಯುವ ನಗರದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಹಿರಿಯ ಐಎಎಸ್ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಸದಾ ಭಾರ್ಗವಿ, ಯಶವಂತಪುರಕ್ಕೆ ವೆಂಕಟೇಶ್.ಎನ್, ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಎಸ್.ಸುರೇಶ್‍ಕುಮಾರ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಬಿ.ಪಿ.ಚೌಹಾಣ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ನಾಲ್ಕು ವಿಧಾನಸಭಾ ಕ್ಷೇತ್ರಗಳ ವೀಕ್ಷಕರಿಗೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ನೀಡಲಾಗಿದೆ.  ಉಪ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಹವಾಲು, ದೂರು ಹಾಗೂ ಮನವಿಗಳಿದ್ದಲ್ಲಿ ಸಾರ್ವಜನಿಕರು ಕುಮಾರ ಕೃಪಾ ಅತಿಥಿ ಗೃಹಕ್ಕೆ ಆಗಮಿಸಿ ದೂರು ಸಲ್ಲಿಸಬಹುದಾಗಿದೆ.

ಸದಾ ಭಾರ್ಗವಿ ಅವರಿಗೆ ರೂಂ.ನಂ.501, ವೆಂಕಟೇಶ್ ಅವರಿಗೆ ರೂಂ.ನಂ.505, ಸುರೇಶ್‍ಕುಮಾರ್ ಅವರಿಗೆ ರೂ.ನಂ.503 ಹಾಗೂ ಚೌಹಾಣ್ ಅವರಿಗೆ ರೂಂ.ನಂ.506 ಕೊಠಡಿಗಳನ್ನು ನಿಯೋಜಿಸಲಾಗಿದೆ.

Facebook Comments