ನಗರಸಭೆ, ಪುರಸಭೆ , ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಚುನಾವಣೆಗೆ ಮಹೂರ್ತ ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿವಿಧ ಕಾರಣಕ್ಕೆ ತೆರವಾಗಿದ್ದ ಒಂದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಹತ್ತು ಸ್ಥಾನಗಳಿಗೆ ಹಾಗೂ ಒಟ್ಟು ಆರು ನಗರಸಭೆ, ಪುರಸಭೆಗಳ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗವು ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯ ಹೆಬ್ಬಾಳ ಕ್ಷೇತ್ರ, ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಆಚೋಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರ, ಚೆನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ ಕ್ಷೇತ್ರ, ಮಾಲೂರು ತಾಲ್ಲೂಕಿನ ಲಕ್ಕೂರು ಕ್ಷೇತ್ರ, ಚಿಂತಾಮಣಿಯ ಕುರಬೂರು, ಗೌರಿಬಿದನೂರಿನ ಅಲಕಾಪುರ, ಗಂಗಾಪುರ, ಶಾಂಪುರ, ರಾಮದುರ್ಗ ತಾಲ್ಲೂಕಿನ ಕಟಕೋಳ, ಹಾಣಗಲ್ ತಾಲ್ಲೂಕಿನ ತಿಳವಳ್ಳಿ, ಸಿರಗುಪ್ಪದ ಕರೂರು ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಲಾಗಿದೆ.

ಇದರ ಜೊತೆಗೆ ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಸಿರಗುಪ್ಪ ನಗರಸಭೆಗಳು, ಸಿಂಧಗಿ ಪುರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೂ ಚುನಾವಣೆ ಘೋಷಿಸಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಒಂದೇ ದಿನಾಂಕ ನಿಗದಿ ಮಾಡಲಾಗಿದೆ.

ಇದೇ ತಿಂಗಳ 25 ರಂದು ಜಿಲ್ಲಾಧಿಕಾರಿಗಳು ಚುನಾವಣೆಯ ಅಧಿಸೂಚನೆ ಹೊರಡಿಸುತ್ತಾರೆ. ಜನವರಿ 28 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಜನವರಿ 29 ನಾಮಪತ್ರ ಪರಿಶೀಲನೆ ದಿನ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಜನವರಿ 30 ಆಗಿದೆ.

ಮತದಾನ ಅವಶ್ಯಕವಾಗಿದ್ದರೆ ಫೆಬ್ರವರಿ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಬೇಕಾಗಿದೆ. ಮರುಮತದಾನ ಅವಶ್ಯಕತೆ ಇದ್ದಲ್ಲಿ ಫೆಬ್ರವರಿ 10 ರಂದು ನಡೆಸಲಾಗುತ್ತದೆ. ಮತ ಎಣಿಕೆ ಫೆಬ್ರವರಿ 11 ರಂದು ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.

Facebook Comments

Sri Raghav

Admin