ಪಂಚಾಯಿತಿ ಚುನಾವಣೆ ನಡೆಸಲು ಐಷಾರಾಮಿ ಕಾರ್‌ಗಳಿಗೆ ಬೇಡಿಕೆ ಇಟ್ಟ ಆಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.5- ಗ್ರಾಮ ಪಂಚಾಯಿತಿ ಚುನಾವಣೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಇನ್ನೂ ಸರಿಯಾದ ಮಾಹಿತಿಯೇ ಇಲ್ಲ. ಹೀಗಿರುವಾಗ ಚುನಾವಣಾ ಆಯೋಗದ ಬಳಕೆಗಾಗಿ ಹೈಎಂಡ್ ಮಲ್ಟಿ- ಯುಟಿಲಿಟಿ ವಾಹನ ಖರೀದಿಗೆ ಸರ್ಕಾರ ಮುಂದಾಗಿದೆ.

ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲಿ ಮುಗಿಯಲಿದೆ. ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು, ಆದರೆ ಕೊರೋನಾ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ಬರುತ್ತದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ.

ಕಳೆದ ವರ್ಷದ ಜುಲೈ ನಲ್ಲಿ ಟಾಟಾ ಇಂಡಿಗೋ ಕಾರು ಹರಾಜು ಹಾಕಿದ್ದ ಚುನಾವಣಾ ಆಯೋಗ ಟಯೋಟಾ ಇನ್ನೋವಾ ಕ್ರಿಸ್ಟಾ ಕಾರಿಗಾಗಿ ಸರ್ಕಾರಕ್ಕೆ ಮನವಿ ಮಾಡಿತ್ತು. ಹೀಗಾಗಿ 2020 ಮತ್ತು 2021ರ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗಾಗಿ ಚುನಾವಣಾ ಆಯೋಗ ರಾಜ್ಯಾದ್ಯಂತ ಸಂಚರಿಸುವ ಅವಶ್ಯಕತೆಯಿದೆ.

ರಾಜ್ಯ ಚುನಾವಣಾ ಆಯೋಗವು 78 ಲಕ್ಷ ರೂ.ಗಳ ಅನುದಾನವನ್ನು ಹೊಂದಿದ್ದು, 2019 ರ ನವೆಂಬರ್ನಲ್ಲಿ ಲಭ್ಯವಿರುವ ನಿಧಿಯಿಂದ 14 ಲಕ್ಷ ರೂ.ಗಳ ವೆಚ್ಚದಲ್ಲಿ ಟೊಯೋಟಾ ಕೊರೊಲಾ ಕಾರು ಖರೀದಿಸಲು ಹಣಕಾಸು ಇಲಾಖೆ ಅನುಮೋದನೆ ನೀಡಿದೆ.

ರಾಜ್ಯ ಚುನಾವಣಾ ಆಯುಕ್ತರ ಹುದ್ದೆಯು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಸಮನಾಗಿರುತ್ತದೆ, ಹೀಗಾಗಿ ಸೌಲಭ್ಯಗಳನ್ನು ಸಮನಾಗಿ ಒದಗಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿತ್ತು. ಜತೆಗೆ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಬೇಕೆಂದು ತಿಳಿಸಿತ್ತು.

ಜೂನ್ 1 2020 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 22 ಲಕ್ಷಕ್ಕೂ ಅಧಿಕ ಮËಲ್ಯದ ವಾಹನ ಖರೀದಿಗೆ ಅನುಮೋದನೆ ನೀಡಿದೆ. ನಾವು ಹಲವು ವರ್ಷಗಳಿಂದ ಹಳೇಯ ಕಾರು ಉಪಯೋಗಿಸುತ್ತಿದ್ದೆವು, ರಾಜ್ಯದ್ಯಂತ ಸಂಚಾರ ಮಾಡುವ ಅಗತ್ಯವಿರುವ ಕಾರಣ ನಮಗೆ ಹೊಸ ಕಾರಿನ ಅವಶ್ಯಕತೆಯಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಿ. ಬಸವರಾಜ್ ತಿಳಿಸಿದ್ದಾರೆ. ಕೊರೋನಾದಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ತಲೆದೋರಿದ್ದು,ಇಂತಹ ಪರಿಸ್ಥಿತಿಯಲ್ಲಿ ಹೊಸ ಕಾರು ಖರೀದಿಗೆ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ.

Facebook Comments