ಕಣ್ಣೀರು-ಕಾಮಾಟಿಪುರ-ರಾಸಲೀಲೆ-ಮಾನನಷ್ಟ : ಮತದಾರರನ್ನು ಸೆಳೆಯಲು ನಾನಾ ಗಿಮಿಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28-ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದಂತೆ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಬೇಕಿದ್ದ ಪ್ರಚಾರ ಈಗ ವೈಯಕ್ತಿಕ ಮಟ್ಟಕ್ಕೂ ಇಳಿದಿದೆ.
ಕಣ್ಣೀರಧಾರೆ, ವಿಕ್ಸ್ ಕಣ್ಣೀರು, ರೆಸಾರ್ಟ್‍ನಲ್ಲಿ ಕಾಮಾಟಿಪುರ, ರಾಸಲೀಲೆ, ಮಾನನಷ್ಟ ಇತ್ಯಾದಿಗಳು ಮತದಾರರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದು, ನೇತಾರರು ಜನತೆ ಮುಂದೆ ಬೆತ್ತಲಾಗುತ್ತಿದ್ದಾರೆ.

ಈವರೆಗೂ ಪ್ರಚಾರ ವೈಯಕ್ತಿಕ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಮಾಜಿ ಸಿಎಂ ಎಚ್‍ಡಿಕೆ ಬುಧವಾರ ಕೆ.ಆರ್.ಪೇಟೆಯಲ್ಲಿ ತಮ್ಮ ಪುತ್ರನ ಸೋಲು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ಇದಕ್ಕೆ ಸಚಿವರಾದ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ತಿರುಗಿಬಿದ್ದಿದ್ದಾರೆ.  ಅದರಲ್ಲೂ ಸದಾನಂದಗೌಡ ಈಗಾಗಲೇ 22 ದಿನಗಳಲ್ಲಿ ಪ್ರವಾಹ ಬಂದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕುಮಾರಸ್ವಾಮಿ ಕಣ್ನೀರಿನಿಂದ ಮತ್ತೆ ಪ್ರವಾಹ ಬಂದು ಜನರು ಇಕ್ಕಟ್ಟಿಗೆ ಸಿಲುಕುವುದು ಬೇಡ ಎಂದು ಕುಹಕವಾಡಿದ್ದರು.

# ಕಣೀರು ನಮ್ಮ ಮನೆಯ ಪೇಟೆಂಟ್:
ಸದಾನಂದಗೌಡರ ಹೇಳಿಕೆಗೆ ಗುರುವಾರ ಹುಣಸೂರಿನಲ್ಲಿ ತಿರುಗೇಟು ನೀಡಿದ ಎಚ್‍ಡಿಕೆ, ನನಗೆ ಬಡವರನ್ನು ಕಂಡರೆ ಕಣ್ಣೀರು ಬರುತ್ತದೆ. ನಾನು ಪಂಚಾತಾರ ಹೋಟೆಲ್‍ನಲ್ಲಿ ಉಳಿದದ್ದು ನಿಜ. ಎಚ್.ವಿಶ್ವನಾಥ್ ತರ ರಾಸಲೀಲೆ ನಡೆಸಲು ರೆಸಾರ್ಟ್‍ನಲ್ಲಿ ರೂಮ್ ಮಾಡಿಕೊಂಡಿರಲಿಲ್ಲ.

ಇವರ ಯೋಗ್ಯತೆ ಏನೆಂಬುದು ನನಗೆ ಗೊತ್ತು. ನನ್ನ ಬಗೆ ಲಘುವಾಗಿ ಮಾತನಾಡಿದರೆ ಬಂಡವಾಳ ಬಿಚುತ್ತೇವೆ ಎಂದು ಎಚ್ಚರಿಸಿದರು. ಸದಾನಂದಗೌಡ ಅವರು ಕುಮಾರಸ್ವಾಮಿ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪ್ರವಾಹ ಉಂಟಾಗಿ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಮಾರಸ್ವಾಮಿ ಕಣ್ಣೀರಿನಿಂದ ಮತ್ತೊಮ್ಮೆ ಪ್ರವಾಹವಾಗುವುದು ಬೇಡ ಎಂದು ವ್ಯಂಗ್ಯವಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಕಣ್ಣೀರು ಹಾಕುವುದು ಅಭ್ಯಾಸವಾಗಿತ್ತು. ಈಗ ಅದನ್ನು ಕುಮಾರಸ್ವಾಮಿ ಮುಂದಿವರೆದಿದ್ದಾರೆ. ನಾಳೆ ನಿಖಿಲ್ ಕಣ್ಣೀರು ಹಾಕಿದರೂ ಅಚ್ಚರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

# ಅಶೋಕ್ ವಾಗ್ದಾಳಿ:
ಕುಮಾರಸ್ವಾಮಿ ಅವರ ಕಣ್ಣೀರಿನ ಬಗ್ಗೆ ಅಶೋಕ್ ಕೂಡ ವಾಗ್ದಾಳಿ ನಡಸಿದ್ದಾರೆ. ಚುನಾವಣೆಯಲ್ಲಿ ಸೋಲುವುದು ಗೊತ್ತಾಗುತ್ತಿದ್ದಂತೆ ಕುಮಾರಸ್ವಾಮಿ ವಿಕ್ಸ್ ಹಾಕಿಕೊಂಡು ಅಳುವುದು ಅಭ್ಯಾಸವಾಗಿಬಿಟ್ಟಿದೆ. ಎಷ್ಟು ದಿನ ನೀವು ಜನರನ್ನು ಮರಳು ಮಾಡುತ್ತೀರಿ ಎಂದು ಪ್ರಶ್ನಿಸಿದರು.

Facebook Comments

Sri Raghav

Admin