ಚುನಾವಣಾ ಕಾರ್ಯಕ್ಕೆ 1615 ಕೆಎಸ್‌ಆರ್‌ಟಿಸಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.26- ರಾಜ್ಯದಲ್ಲಿ ನಾಳೆ ನಡೆಯುವ 2ನೇ ಹಂತದ ಗ್ರಾಮಪಂಚಾಯ್ತಿ ಚುನಾವಣೆಗೆ ಕೆಎಸ್‍ಆರ್‍ಟಿಸಿಯಿಂದ 1615 ಬಸ್‍ಗಳನ್ನು ನೀಡಲಾಗಿದೆ.  ಗ್ರಾಮಪಂಚಾಯ್ತಿ ಚುನಾವಣಾ ಕಾರ್ಯಕ್ಕಾಗಿ ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಇಂದು ಮತ್ತು ನಾಳೆ ಬಸ್‍ಗಳನ್ನು ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಸುಮಾರು 5 ಸಾವಿರ ಬಸ್‍ಗಳು ಪ್ರತಿದಿನ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದು, ಚುನಾವಣಾ ಕಾರ್ಯಕ್ಕೆ ಬಸ್ ನೀಡಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ರಾಜ್ಯದ 109 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆಯು ಕಡಿಮೆ ಇರುತ್ತದೆ. ದೈನಂದಿನ ಮಾರ್ಗದಲ್ಲಿ ವ್ಯತ್ಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

ರಾಮನಗರ-73, ತುಮಕೂರು-167, ಕೋಲಾರ-107, ಚಿಕ್ಕಬಳ್ಳಾಪುರ -169, ಮಂಡ್ಯ-145, ಚಾಮರಾಜ ನಗರ-184, ಹಾಸನ-48, ಚಿಕ್ಕಮಗಳೂರು-79 ಬಸ್‍ಗಳನ್ನು ಇಂದು ಮತ್ತು ನಾಳೆ ಗ್ರಾಮಪಂಚಾಯ್ತಿ ಚುನಾವಣೆಗೆ ನೀಡಲಾಗಿದೆ.

ಮಂಗಳೂರು-105, ಪುತ್ತೂರು-127, ದಾವಣಗೆರೆ- 88, ಶಿವಮೊಗ್ಗ-149, ಚಿತ್ರದುರ್ಗ-133 ಸೇರಿದಂತೆ ಒಟ್ಟು 1615 ಬಸ್‍ಗಳನ್ನು ನೀಡಲಾಗಿದೆ.  ಸಾಮಾಗ್ರಿಗಳೊಂದಿಗೆ ಚುನಾವಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಹಾಗೂ ಮತ್ತೆ ವಾಪಸ್ ಕರೆ ತರಲು ಈ ಬಸ್‍ಗಳನ್ನು ಬಳಸಿಕೊಳ್ಳ ಲಾಗುತ್ತದೆ.

Facebook Comments