ವಿದ್ಯುತ್ ತಂತಿ ತಗಲಿ 4 ವರ್ಷದ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.9- ವಿದ್ಯುತ್ ತಂತಿ ತಗಲಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಕಲುಗೂಡು ಪಟ್ಟಣದಲ್ಲಿ ನಡೆದಿದೆ. ಶುಷ್ಮಿತಾ ಮತ್ತು ಪ್ರಕಾಶ್ ದಂಪತಿಯ ಪುತ್ರ ದನುಷ್ (4) ಮೃತಪಟ್ಟ ಬಾಲಕ. ನಿನ್ನೆ ಸಂಜೆ ಆಟವಾಡಲು ಮನೆಯ ಮಹಡಿಯ ಮೇಲೆ ಹೋಗಿದ್ದಾಗ ಅಲ್ಲಿಯೇ ಹಾದುಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮಗುವನ್ನು ರಕ್ಷಿಸಲು ಬಂದ ಮನೆ ಮಾಲೀಕನಿಗೂ ವಿದ್ಯುತ್ ಸ್ಪರ್ಶಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಸಮೀಪ 11 ಕೆವಿ ವಿದ್ಯುತ್ ಲೈನ್ ಅವೈಜ್ಞಾನಿಕವಾಗಿ ಅಳವಡಿಸಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಕಂಬ ಒಂದೇ ಕಡೆ ಬಾಗಿದ್ದು, ಮನೆಯ ಮುಂದೆಯೇ ತಂತಿಗಳು ಕೈಗೆ ಸಿಗುವಂತಿವೆ. ಇದನ್ನರಿತ ಸ್ಥಳೀಯರು ಹಲವು ಭಾರಿ ದುರಸ್ಥಿಗೆ ಮನವಿ ಮಾಡಿದ್ದರು.ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರು. ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪುಟ್ಟ ಮಗುವಿನ ಸಾವಿಗೆ ಅಧಿಕಾರಿಗಳೇ ಕಾರಣವೆಂದು ಸ್ಥಳೀಯರು ದೂರಿದ್ದಾರೆ.

ಆಕ್ರಂದನ: ಈ ದಂಪತಿಗೆ ಒಬ್ಬನೇ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Facebook Comments