ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೈಕ್ ಸವಾರ ಸಜೀವ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಆ.11- ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸವಾರನೊಬ್ಬ ಬೈಕ್ ಸಮೇತ ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಡ್ಪಿನಂಗಡಿ ಬಳಿ ನಡೆದಿದೆ.

ಸುಳ್ಯದ ಮಂಡೆಕೋಲು ನಿವಾಸಿ ಉಮೇಶ್ ಮೃತಪಟ್ಟ ದುರ್ದೈವಿ.
ಉಮೇಶ್ ಬಳ್ಪದಲ್ಲಿರುವ ತನ್ನ ಸಂಬಂಕರ ಮನೆಗೆ ಬಂದಿದ್ದು, ಇಂದು ಬೆಳಗ್ಗೆ ಹಾಲು ಕರೆಬೇಕೆಂದುಅಲ್ಲಿಂದ ಮುಂಜಾನೆ 4.30ರ ಸುಮಾರಿಗೆ ಹೊರಟಿದ್ದರು.

ರಸ್ತೆ ಮಾರ್ಗದಲ್ಲಿ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ.ವಿದ್ಯುತ್ ತಂತಿಯ ಮೇಲೆಯೇ ಬೈಕ್ ಚಲಾಯಿಸಿದ ಪರಿಣಾಮ ಬೈಕಿಗೆ ವಿದ್ಯುತ್ ಪ್ರವಹಿಸಿ ಸವಾರ ಸಜೀವ ದಹನವಾಗಿದ್ದಾರೆ.

ಈ ಘಟನೆ ಬೆಳ್ಳಂಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಅಕಾರಿಗಳು ಹಾಗೂ ಸುಳ್ಯ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin