ಅರಣ್ಯ ಇಲಾಖೆಯಿಂದ ಗಜರಾಜನ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.22- ರೈಲ್ವೆ ಕಂಬಿಗೆ ಸಿಲುಕಿ ನರಳುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಮೈಸೂರಿನ ಸರಗೂರು ತಾಲ್ಲೂಕಿನ ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಿನಿಂದ ಹೊರ ಬಂದು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ರೈಲ್ವೆ ಕಂಬಿಗಳ ಅಡಿಯಲ್ಲಿ ಕಾಡಾನೆ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

ಈ ವೇಳೆ ಆನೆ ಸಿಲುಕಿದ ವಿಷಯ ತಿಳಿದ ಎನ್.ಬೇಗೂರು ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಾಚರಣೆ ಮಾಡಿ ರೈಲ್ವೆ ಕಂಬಿಯನ್ನು ಕಿತ್ತು ಹಾಕಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಮಯ ಪ್ರಜ್ಞಾಗೆ ಪರಿಸರ ಪ್ರೇಮಿಗಳು, ಹಾಗೂ ವನ್ಯಜೀವಿ ಪ್ರಿಯರು ಶ್ಲಾಘಿಸಿದ್ದಾರೆ.

Facebook Comments