ಗ್ರಾಮಕ್ಕೆ ನುಗ್ಗಿದ ಆನೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ಎಚ್‍ಡಿ ಕೋಟೆ, ಮೇ 17- ಇಂದು ಬೆಳಗ್ಗೆ ಆನೆಯೊಂದು ಗ್ರಾಮಕ್ಕೆ ನುಗ್ಗಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಕಬಿನಿ ಜಲಾಶಯದ ಬಳಿಯ ಬೀಚನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಮೊಬೈಲ್ ಮೂಲಕ ಸಂಬಂಧಿಕರಿಗೆ, ಅಕ್ಕಪಕ್ಕದವರಿಗೆ ತಿಳಿಸಿ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ ಆನೆ ಹಿಂಡು ನೀರು ಕುಡಿಯುವುದಕ್ಕೆ ಬರುವುದು ಮಾಮೂಲು. ಆದರೆ, ಗ್ರಾಮಕ್ಕೆ ನುಗ್ಗಿರುವುದು ಇದೇ ಮೊದಲು ಎಂದು ರೈತರೊಬ್ಬರು ತಿಳಿಸಿದ್ದಾರೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಒಂಟಿ ಸಲಗ ಬಂದಿರುವುದರಿಂದ ಅರಣ್ಯ ಇಲಾಖೆ ಅದನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಿದೆ.

Facebook Comments