ಮತ್ತೆ ಹಾಸನಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜು.23- ಕಳೆದ 15 ದಿನಗಳ ಹಿಂದೆ ನಗರದ ಹುಣಸನಕೆರೆಯಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಬೆಳಗ್ಗೆ ಮತ್ತೊಂದು ಒಂಟಿ ಸಲಗ ಜವೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ.

ಇಂದು ಬೆಳಗ್ಗೆ ನಗರಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗವೊಂದು ಪಿಎನ್‍ಟಿ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ನಂತರ ಜವೇನಹಳ್ಳಿ ಕೆರೆಯ ನೀರಿನ ಮಧ್ಯದಲ್ಲಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಡಿಎಫ್‍ಒ, ಆರ್‍ಎಫ್‍ಒ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಸೀಗೆಗುಡ್ಡದ ಕಡೆಗೆ ಓಡಿಸಿದ್ದಾರೆ.

ಈ ವೇಳೆ ಕಾಡಾನೆ ಉದ್ದೂರು, ಶಂಖ, ಅತ್ತಿಹಳ್ಳಿ, ಇಬ್ಬಾಣಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸೀಗೆಗುಡ್ಡದತ್ತ ತೆರಳಿದೆ.  ಪದೇ ಪದೇ ಅದೂ ಬೆಳ್ಳಂಬೆಳಗ್ಗೆ ನಗರದಲ್ಲಿ ಕಾಡಾನೆ ಪ್ರತ್ಯಕ್ಷವಾಗುತ್ತಿರುವುದರಿಂದ ನಗರದ ನಾಗರಿಕರು ಆತಂಕಕ್ಕೀಡಾಗಿದ್ದು, ಆನೆಗಳು ನಗರಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕೆಂದು ನಗರದ ಜನರು ಒತ್ತಾಯಿಸಿದ್ದಾರೆ.

Facebook Comments