ಆಸ್ಸಾಂನಲ್ಲಿ ‘ಬಿನ್ ಲಾಡೆನ್’ ಸಾವು..!!

ಈ ಸುದ್ದಿಯನ್ನು ಶೇರ್ ಮಾಡಿ

ಅಸ್ಸಾಂ ,ನ.18- ಇಡೀ ವಿಶ್ವಕ್ಕೆ ಮಾರಕವಾಗಿದ್ದ ಬಿನ್‍ಲಾಡೆನ್ ಸತ್ತ ವಿಷಯ ನಿಮಗೆ ತಿಳಿದಿದೆ, ಆದರೆ ಈಗ ನಿನ್ನೆ ಆಸ್ಸಾಂನಲ್ಲಿ ಬಿನ್ ಲಾಡೆನ್ ಸತ್ತು ಹೋಗಿದ್ದಾನೆ ಎಂಬ ಸುದ್ದಿಯು ಎಲ್ಲೆಡೆ ಹರಡಿದೆ. ಅರೆ ಬಿನ್‍ಲಾಡೆನ್ ಇನ್ನೂ ಬದುಕಿದ್ದನಾ? ಈಗ ಅವನ ಪ್ರಾಣಪಕ್ಷಿ ಹಾರಿಹೋಯಿತೇ ಎಂದು ಅಚ್ಚರಿಪಡಬೇಡಿ, ನಿನ್ನೆ ಸತ್ತು ಬಿದ್ದ ಬಿನ್ ಲಾಡೆನ್,

ಒಸಾಮಾ ಅಲ್ಲ ಬದಲಿಗೆ ಇತ್ತೀಚೆಗೆ ಐವರು ಗ್ರಾಮಸ್ಥರನ್ನು ಅಮಾನುಷವಾಗಿ ತುಳಿದು ಕೊಂದಿದ್ದ ಬಿನ್ ಲಾಡೆನ್ ಎಂಬ ಆನೆ…!ಕ್ರೂರ ಪ್ರವೃತ್ತಿಯನ್ನು ಹೊಂದಿದ್ದ ಆನೆಗೆ ಬಿನ್ ಲಾಡೆನ್ ಎಂದು ಹೆಸರಿಡಲಾಗಿತ್ತು, ಅದಕ್ಕೆ ಸೂಕ್ತ ತರಬೇತಿ ನೀಡಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಟ್ಟು ಇತ್ತೀಚೆಗಷ್ಟೇ ಅಸ್ಸಾಂನ ಓರಂಗ್ ನ್ಯಾಷನಲ್ ಪಾರ್ಕ್‍ಗೆ ಆ ಆನೆಯನ್ನು ಸ್ಥಳಾಂತರಿಸಿ ಕೃಷ್ಣ ಎಂದು ನಾಮಕರಣ ಮಾಡಲಾಯಿತು. ಇಲ್ಲೂ ಕೂಡ ಆ ಆನೆಗೆ ಸೂಕ್ತ ತರಬೇತಿ ನೀಡಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು.

ಕೃಷ್ಣ ಆನೆ ಅಲ್ಲಿಂದ ತಪ್ಪಿಸಿಕೊಂಡು ಹೋಗದಿರ ಲೆಂದು ಅದರ ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಲಾಗಿತ್ತಾದರೂ ಕೂಡ ಅಲ್ಲಿಂದ ತಪ್ಪಿಸಿಕೊಂಡಿತ್ತು. ಲಾಡೆನ್ ಆನೆ (35 ವರ್ಷ) ಯ ಹಾವಳಿಯಿಂದ ಅಸ್ಸಾಂನ ಗುವಾಹಟಿಯ ಜನರು ಕಂಗಾಲಾಗಿದ್ದರು.

ಈ ಆನೆಯನ್ನು ಹಿಡಿಯಲು ಡ್ರೋನ್ ಬಳಸಿ ಅರಣ್ಯಾಧಿಕಾರಿಗಳು ಒಂದು ವಾರದ ನಂತರ ತಪಾಸಣೆಯ ನಂತರ ಸೆರೆಹಿಡಿದಿದ್ದರು, ಆದರೆ ಈಗ ಲಾಡೆನ್ ಆನೆ ದಿಢೀರನೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Facebook Comments