ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜು.24- ನಗರಕ್ಕೆ ಬಂದಿದ್ದ ಒಂಟಿ ಸಲಗವನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿ ಸಾಯಿಸಿರುವ ಘಟನೆ ತಾಲ್ಲೂಕಿನ ಸೀಗೆಗುಡ್ಡದ ಬಳಿ ನಡೆದಿದೆ. ಅರಣ್ಯ ರಕ್ಷಕ ಅಣ್ಣೇಗೌಡ (50) ಮೃತಪಟ್ಟ ದುರ್ದೈವಿ.

ಮೈಸೂರು ಮೂಲದ ಅಣ್ಣೇಗೌಡ ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಸೀಗೆಗುಡ್ಡದ ಬಳಿ ಕಾಣಿಸಿಕೊಂಡಿದ್ದ ಆನೆಯನ್ನು ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಯತ್ನಿಸುತ್ತಿದ್ದಾಗ ಈ ವೇಳೆ ಅಣ್ಣೇಗೌಡರ ಮೇಲೆ ಎರಗಿದ ಒಂಟಿ ಸಲಗ ಸೊಂಡಿಲಿನಿಂದ ಬಡಿದು ಸಾಯಿಸಿದೆ.

5 ಲಕ್ಷ ರೂ. ಪರಿಹಾರ: ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನಿಧಿಯಿಂದ ಮೃತ ಅಣ್ಣೇಗೌಡ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಜತೆಗೆ ಜಿಲ್ಲೆ ಮತ್ತು ಹೊರ ಜಿಲ್ಲೆಯ ಇಲಾಖಾ ಸಿಬ್ಬಂದಿ ನೆರವು ಪಡೆದು ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಡಿಎಫ್‍ಒ ಶಿವರಾಮ್ ಬಾಬು ತಿಳಿಸಿದ್ದಾರೆ.

Facebook Comments