ಆನೆ ದಾಳಿ : ಬಾಳೆ ಬೆಳೆ ನಾಶ, ಸಂಕಷ್ಟಕ್ಕೀಡಾದ ರೈತ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮಾ.5-ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಫಸಲನ್ನು ನಾಶ ಮಾಡಿರುವ ಘಟನೆ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ.

ಪುಟ್ಟಲಿಂಗಮ್ಮ ಎಂಬುವರು ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು ರಾತ್ರಿ ಆನೆ ಬಂದು ಬಾಳೆ ತೋಟವನ್ನ ತುಳಿದು ತಿಂದು 1,50,000 ರೂ. ಗಳಷ್ಟು ನಷ್ಟ ಮಾಡಿದೆ. ರೈತ ಮಹಿಳೆ ಸಾಲ ಮಾಡಿ ಬೆಳೆ ನೆಟ್ಟಿದ್ದರು. ಈಗ ನಾವು ಹೇಗೆ ಸಾಲ ತೀರಿಸಿ ಜೀವನ ನಡೆಸುವುದು ಎಂದು ಬಾಳೆ ತೋಟದಲ್ಲಿ ಕುಳಿತು ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ತಾಲ್ಲೂಕಿನಲ್ಲಿ ಆನೆ ದಾಳಿಗಳಿಂದ ಬಹಳಷ್ಟು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆನೆ ದಾಳಿ ತಡೆಗಟ್ಟಿ. ಸೂಕ್ತ ಪರಿಹಾರ ನೀಡಲು ಪ್ರಮಾಣಿಕ ಕರ್ತವ್ಯವನ್ನ ನಿರ್ವಹಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್.ಎಲ್.ಭರತ್ ರಾಜ್ ಆರೋಪಿಸಿದ್ದಾರೆ. ಅರಣ್ಯ ಇಲಾಖೆಯ ಬೇಜವಾಬ್ದಾರಿತನವನ್ನು ಖಂಡಿಸಿ ಸೂಕ್ತ ಪರಿಹಾರ ಒತ್ತಾಯಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

Facebook Comments