ಗ್ರಾಮಕ್ಕೆ ನುಗ್ಗಿ ರೈತನ ಮೇಲೆ ದಾಳಿ ಮಾಡಿದ ಕಾಡಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜು.4- ಭತ್ತದ ರುಚಿ ನೋಡಿದ ಕಾಡಾನೆಯೊಂದು ಮತ್ತೆ ಗ್ರಾಮಕ್ಕೆ ನುಗ್ಗಿ ರೈತನ ಮೇಲೆ ದಾಳಿ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಕಾಡ್ಲೂರು ಕೊಪ್ಪಲಿನಲ್ಲಿ ನಡೆದಿದೆ.

ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ನಿನ್ನೆಯಷ್ಟೇ ಶಿವಕುಮಾರ್ ಎಂಬುವರ ಮನೆಯಲ್ಲಿ ಭತ್ತ ತಿಂದು ಹೋಗಿದ್ದ ಒಂಟಿ ಸಲಗ ಮತ್ತೆ ಭತ್ತ ತಿನ್ನಲು ವಾಪಸ್ ಬಂದಿದ್ದು , ಈ ವೇಳೆ ರೈತ ಶಿವಕುಮಾರ್ ಡೈರಿಗೆ ಹಾಲು ಹಾಕಿ ವಾಪಸ್ ಮನೆಗೆ ಬರುತ್ತಿದ್ದಾಗ ಅವರ ಮೇಲೆ ಎರಗಿ ದಾಳಿ ಮಾಡಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಶಿವಕುಮಾರನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪದೇ ಪದೇ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು , ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಶಾಶ್ವತ ಪರಿಹಾರಕ್ಕಾಗಿ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

Facebook Comments