ಸಕಲೇಶಪುರ ಬಳಿ ರೈಲು ಡಿಕ್ಕಿ ಹೊಡೆದು ಆನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elephant--01

ಹಾಸನ. ಜೂ. 04 : ಬೆಂಗಳೂರು-ಮಂಗಳೂರು ರೈಲಿಗೆ ಸಿಕ್ಕಿ ಆನೆಯೊಂದು ಸಾವನ್ನಪ್ಪಿದೆ. ಹಾಸನದ ಸಕಲೇಶಪುರ ತಾಲೂಕಿನ ಯಡಕುಮರಿಯ 70 ಮೈಲಿ ಬಳಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು, ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಹಾದು ಹೋಗಿರುವ ರೈಲ್ವೆ ಹಳಿ ಮೇಲೆ ಆನೆಗಳು ಹಳಿ ದಾಟುತ್ತಿದ್ದಾಗ ಬೆಂಗಳೂರು-ಮಂಗಳೂರು ರೈಲು ಡಿಕ್ಕಿ ಹೊಡೆದಿದೆ. ಈ ವೇಳೆ ಒಂದು ಆನೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಆನೆ ಗಾಯಗೊಂಡಿದೆ. ಮೃತ ಆನೆಯ ಶವ ಪರೀಕ್ಷೆ ಮಾಡಿ ಮುಂದಿನ ಕಾರ್ಯ ಕೈಗೊಳ್ಳಲಾಗಿದೆ. ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ಮುಂದುವರೆದಿದೆ.

Elephant--03

Elephant--02

Facebook Comments

Sri Raghav

Admin