ವಿದ್ಯುತ್ ಸ್ಪರ್ಶವಾಗಿ ಕಾಡಾನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಡಿ.11- ಧನಗೂರು ಸಮೀಪ ಶಿಂಷಾ ಅರಣ್ಯ ಪ್ರದೇಶದ ಬಳಿ ಇರುವ ಶಿವಮ್ಮ ಎಂಬುವವರ ಜಮೀನಿನಲ್ಲಿ ಕಾಡಾನೆಯೊಂದು ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದೆ. ಹಲಸಹಳ್ಳಿ ದನಗೂರು ಸಮೀಪ ಇರುವ ಶಿಂಷಾ ಅರಣ್ಯ ಪ್ರದೇಶದಿಂದ ಆಹಾರ ಅರಸಿಕೊಂಡು ಮೂರು ದಿನಗಳ ಹಿಂದೆ ಬಂದ ಸುಮಾರು ಏಳು ವರ್ಷದ ಮರಿ ಕಾಡಾನೆಯೊಂದು ಶಿವಮ್ಮ ಎಂಬುವವರಿಗೆ ಸೇರಿದ ಭತ್ತದ ಗದ್ದಾಯಲ್ಲಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದೆ.

ಸಾಯಂಕಾಲ ವಿಷಯ ತಿಳಿದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾ ಅಧಿಕಾರಿ ರಾಜು ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಂಷಾ ಅರಣ್ಯ ಪ್ರದೇಶದಿಂದ ಬಂದಿರುವ ಮರಿ ಕಾಡಾನೆಗೆ ವಿದ್ಯುತ್ ಸ್ಪರ್ಶ ಆಗಿರುವುದು ಕಂಡು ಬಂದಿದೆ.

ಪಶುವೈದ್ಯಾಧಿಕಾರಿ ಆನೆಯ ಶವ ಪರೀಕ್ಷೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ಇತರರು ಸ್ಥಳದಲ್ಲಿದ್ದರು.

Facebook Comments