ನಡುರಸ್ತೆಯಲ್ಲಿ ಕಾಡಾನೆಗಳ ಕಿತ್ತಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಸಕಲೇಶಪುರ: ಕಾಡಾನೆಗಳ ಗುಂಪಿನ ಹಿಡಿತ ಸಾಧಿಸಲು ಎರಡು ಕಾಡಾನೆಗಳು ತೀವ್ರವಾಗಿ ಗುದ್ದಾಟ ನಡೆಸಿದ ಘಟನೆ ನಡೆದಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಷ್ಟು ದಿನಗಳು ರೈತರ ಬೆಳೆಗಳು ಹಾಗೂ ಮನುಷ್ಯರ ಮೇಲೆ ಎರಗುತ್ತಿದ್ದ ಕಾಡಾನೆಗಳು, ಇದೀಗ ಕಾಡಾನೆಗಳ ಜಿದ್ದಾಜಿದ್ದಿಗೆ ಬಿದ್ದಿವೆ.

ತಾಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದ ರಸ್ತೆಯಲ್ಲಿ ಎರಡು ಸಲಗಗಳು ಒಂದಕ್ಕೊಂದು ತನ್ನ ಕೋರೆಗಳಿಂದ ತಿವಿದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ಕಾಡಾನೆಗಳು ಆಹಾರಕ್ಕಾಗಲಿ, ಮದವೇರಿದಾಗ ಸಮಯದಲ್ಲಾಗಲಿ ಈ ರೀತಿ ಗುದ್ದಾಡಿ ಕೊಳ್ಳುವುದಕ್ಕಿಂತ ಕಾಡಾನೆ ಗುಂಪಿನಲ್ಲಿ ತಮ್ಮ ಪಾರುಪತ್ಯಕ್ಕೆ ಈ ರೀತಿ ಘರ್ಷಣೆಗಳು ಮಾಡಿಕೊಳ್ಳುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇನ್ನೂ ಘರ್ಷಣೆಗಳನ್ನು ನೋಡಿದ ಸ್ಥಳೀಯರು ಆತಂಕ ಹಾಗೂ ಭಯದಲ್ಲಿ ಇರುವಂತಾಗಿದೆ. ಕಾಫಿ ತೋಟಗಳಿಗೆ ಅಳವಡಿಸಿದ ನೀರಿನ ಪೈಪ್, ಹಾಗೂ ರೈತರ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತವೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

Facebook Comments

Sri Raghav

Admin