ನಾಳೆಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಕಳುಹಿಸುವ ಕಾರ್ಯಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಜೂ.9-ರಾಮನಗರ ಅರಣ್ಯ ವಿಭಾಗ ಹಾಗೂ ಇತರೆ ವನ್ಯಜೀವಿ ವಿಭಾಗಗಳ ನುರಿತ ಸಿಬ್ಬಂದಿಗಳಿಂದ ನಾಳೆಯಿಂದ ಮೂರು ದಿನಗಳ ಕಾಲ ಕಾಡಾನೆಗಳನ್ನು ಅರಣ್ಯಕ್ಕೆ  ಕಳುಹಿಸುವ ಕಾರ್ಯಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ರೈತರು ಮತ್ತು ಸಾರ್ವಜನಿಕರಿಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ, ಜಾನುವಾರು, ಆಸ್ತಿ ಮುಂತಾದವುಗಳ ಮೇಲೆ ದಾಳಿಮಾಡಿ ಹಾನಿ ಉಂಟುಮಾಡಿರುವ ಹಿನ್ನೆಯಲ್ಲಿ ಅರಣ್ಯ ಇಲಾಖೆಯ ಈ ಕಾರ್ಯಚರಣೆಯನ್ನು ಹಮ್ಮಿಕೊಂಡಿದೆ.

ಆನೆಗಳನ್ನು ಜಿಲ್ಲೆಯ ಗಡಿಯಂಚಿನಲ್ಲಿರುವ ಕಾವೇರಿ ವನ್ಯಜೀವಿಧಾಮ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮರು ಅಟ್ಟುವುದು ಅವಶ್ಯಕವಾಗಿರುತ್ತದೆ. ಹೀಗಾಗಿ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿ,

ವಿರೂಪಾಕ್ಷಿಪುರ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಎಲ್ಲಾ  ರೈತರು ಮತ್ತು ಸಾರ್ವಜನಿಕರು ಮೂರು ದಿನಗಳ ಕಾಲ ತಮ್ಮ ತಮ್ಮ ಸುರಕ್ಷಿತ ಸ್ಥಳಗಳಲ್ಲಿ ಇದ್ದು ಹೊರಗೆ ಕಾಣಿಸದೆ ಸಾರ್ವಜನಿಕವಾಗಿ ಓಡಾಡದೇ ಕಾರ್ಯಚರಣೆಗೆ ಸಹಕರಿಸಬೇಕು ಎಂದು ರಾಮನಗರ ಪ್ರಾದೇಶಿಕ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments