ನಾಡಹಬ್ಬ ಮೈಸೂರು ದಸರಾ : ಸೆ.2ಕ್ಕೆ ಗಜಪಯಣ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

dasara-Eliphant
ಮೈಸೂರು, ಆ.30- ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಾದ ಗಜಪಯಣ ಸೆ.2 ರಂದು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್‍ನಿಂದಲೇ ಚಾಲನೆಗೊಳ್ಳಲಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದಿಂದ ಅಂದು ಬೆಳಗ್ಗೆ
9 ಗಂಟೆಗೆ ಗಜಪಯಣ ಆರಂಭವಾಗಲಿದೆ.

ಅಂಬಾರಿ ಹೊರುವ ಅರ್ಜುನ ಸೇರಿದಂತೆ ಮೊದಲ ಹಂತದಲ್ಲಿ 6 ಆನೆಗಳು ಕಾಡಿನಿಂದ ನಾಡಿಗೆ ಬರಲಿವೆ.  ಈ ಹಿನ್ನೆಲೆಯಲ್ಲಿ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ರಾಜರ ಕಾಲದಲ್ಲಿ ನಾಗರಹೊಳೆ ಕಾಡಿಗೆ ತೆರಳಿ ಆದಿವಾಸಿಗಳ ಸಂಪ್ರದಾಯದಂತೆ ಮಾವುತರಿಗೆ ಗೌರವಪೂರ್ವಕವಾಗಿ ಆಹ್ವಾನ ನೀಡಿ ಆನೆಗಳನ್ನು ದಸರಾ ಮಹೋತ್ಸವಕ್ಕೆ ಕರೆತರಲಾಗುತ್ತಿತ್ತು. ಅಂದಿನಿಂದಲೂ ವೀರನಹೊಸಹಳ್ಳಿಯಲ್ಲೇ ಆನೆಗಳನ್ನು ಕರೆತರುವ ಸಂಪ್ರದಾಯವಿತ್ತು. ಆದರೆ ಕಳೆದೆರಡು ವರ್ಷಗಳಿಂದ ಇದರಲ್ಲಿ ಅಲ್ಪ ಮಟ್ಟಿನ ಬದಲಾವಣೆಯಾಗಿದ್ದು, ಇದೀಗ ಮತ್ತೆ ಅದೇ ಮಾದರಿಯಲ್ಲಿ ಆನೆಗಳನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ.

Facebook Comments

Sri Raghav

Admin