ಖಾಸಗಿ ಬಸ್ ಡಿಕ್ಕಿ ಹೊಡೆದು ಸಾಕಾನೆ ರೌಡಿ ರಂಗ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elephant--01
ಮಡಿಕೇರಿ, ಅ.8- ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಕಣ್ಣನ್ನೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಸಾಕಾನೆಯೊಂದು ಸಾವನ್ನಪ್ಪಿದೆ. ಮತ್ತಿಗೋಡು ಆನೆಕ್ಯಾಂಪ್‍ನಲ್ಲಿರುವ ನಲವತೈದು ವರ್ಷ ಪ್ರಾಯದ ಆನೆ ರಂಗನನ್ನು ಎಂದಿನಂತೆ ಕಳೆದ ರಾತ್ರಿಯೂ ತಿರುಗಾಡಲು ಬಿಡಲಾಗಿತ್ತು. ಸುಮಾರು ರಾತ್ರಿ 2 ಗಂಟೆ ಸುಮಾರಿಗೆ ಈ ಮಾರ್ಗದಲ್ಲಿ ವೇಗವಾಗಿ ಬಂದ ಕಲ್ಪಕ ಎಂಬ ಖಾಸಗಿ ಬಸ್ ಸಾಕಾನೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆನೆಯ ಸೊಂಟ ಮುರಿದು ತೀವ್ರ ಗಾಯಗೊಂಡಿತ್ತು.

Elephant--02

ವಿಷಯ ತಿಳಿದು ಸ್ಥಳಕ್ಕೆ ಬಂದ ಆನೆಕ್ಯಾಂಪ್‍ನ ವೈದ್ಯ ಡಾ. ಮುಜೀಬ್ ಮತ್ತು ಆನೆ ಮಾವುತರು ಇತರೆ ಆನೆಗಳ ಸಹಕಾರದಿಂದ ಶುಶ್ರೂಷೆ ನಡೆಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ರಂಗನನ್ನು ಎಂದಿನಂತೆ ರಾತ್ರಿ ತಿರುಗಾಡಲು ಬಿಡಲಾಗಿತ್ತು. ಇದೀಗ ಆನೆಯ ಸೊಂಟ ಮುರಿದಿದ್ದು, ವೈದ್ಯಾಧಿಕಾರಿ ಡಾ. ಮುಜೀಬ್‍ ಅವರು ಚಿಕಿತ್ಸೆ ಆರಂಭಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೌಡಿ ರಂಗ ಸಾವನ್ನಪ್ಪಿದ್ದಾನೆ.

Elephant--03

ಈ ಆನೆಯನ್ನು 3 ವರ್ಷಗಳ ಹಿಂದೆ ಸೆರೆಹಿಡಿದು ಪಳಗಿಸಲಾಗಿತ್ತು. ರೌಡಿ ರಂಗ ಎಂದು ಈ ಆನೆ ಪ್ರಖ್ಯಾತಿ ಪಡೆದಿತ್ತು ಎಂದು ಕಾವಡಿ ಒಬ್ಬರು ತಿಳಿಸಿದ್ದಾರೆ. ಎರಡು ದಿನ ಕಳೆದಿದ್ದರೆ ಈ ಆನೆ ಮೈಸೂರು ದಸಾರಕ್ಕೆ ಹೋಗುತಿತ್ತು ಎಂದು ಶುಶ್ರೂಷೆ ಮಾಡುತ್ತಿದ್ದ ಕಾವಾಡಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

Elephant--05

Elephant--04

Facebook Comments

Sri Raghav

Admin