ಕೊನೆಗೂ ಸೆರೆಯಾಯ್ತು ಕಿಲ್ಲರ್ ಒಂಟಿ‌‌ ಸಲಗ, ಅರಣ್ಯ ಇಲಾಖೆಯ ಆಪರೇಷನ್ ಸಕ್ಸಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಇತ್ತೀಚೆಗೆ ನಗರದಲ್ಲಿ ಕಾಣಿಸಿಕೊಂಡು ಇಬ್ಬರ ಪ್ರಾಣ ತೆಗೆದಿದ್ದ “ಕಿಲ್ಲರ್” ಒಂಟಿಸಲಗವನ್ನು ಯಶಸ್ವಿ ಕಾರ್ಯಚರಣೆ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಗಳು ಐದು ಸಾಕಾನೆ ಸಹಾಯದ ಮೂಲಕ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಒಂಟಿ ಸಲಗ ಹಾಸನ ನಗರದ ಹುಣಸಿನಕೆರೆಗೆ ಬಂದು ಅಲ್ಲೇ  ದಿನಪೂರ್ತ ಕಾಲ ಕಳೆದಿತ್ತು. ನಂತರ ಆ ಆನೆಯನ್ನು ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಿದ್ದರು. ಇಲ್ಲಿಗೆ ಬರುವ ಮೊದಲೆ ಇಬ್ಬರ ಬಲಿ ತೆಗೆದುಕೊಂಡಿ ತ್ತೆನ್ನಲಾಗಿದೆ.

ಮತ್ತೆ ಜುಲೈ ತಿಂಗಳಲ್ಲಿ ಅದೆ ಒಂಟಿ ಸಲಗ ಮತ್ತೆ ನಗರಕ್ಕೆ ಎಂಟ್ರಿ ಕೊಟ್ಟು ಪೆನ್ಷನ್ ಮೊಹಲ್ಲಾ, ಜವೇನಹಳ್ಳಿ ಮಠದ ಬಳಿ ಸುತ್ತಾಡಿತ್ತು. ಅರಣ್ಯ ಇಲಾಖೆಯವರು ಎಚ್ಚರಿಕೆಯಿಂದ ಕಾಡಾನೆಯನ್ನು ಕಾಡಿಗೆ ಓಡಿಸುವಲ್ಲಿ ಮತ್ತೊಮ್ಮೆ ಯಶಸ್ವಿಯಾದರೂ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವನನ್ನು ಬಲಿ ತೆಗೆದುಕೊಂಡಿತು.

ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರವಾಗಿ ಪರಿಗಣಿಸಿ ಇಲಾಖೆಯ ಮೇಲಾಧಿಕಾರಿಗಳಿಗೆ ಆನೆ  ಹಿಡಿಯಲು ಸಾಕಾನೆಗೆಗಳನ್ನು ರವಾನಿಸುವಂತೆ ಮನವಿ ಮಾಡಿದ್ದಂತೆ ಶನಿವಾರ ತಾಲ್ಲೂಕಿನ ವೀರಾಪುರದ ಕ್ಯಾಂಪ್ ಜಾಗಕ್ಕೆ 5 ಕಾಡಾನೆಗಳನ್ನು ಕರೆ ತರಲಾಗಿತ್ತು.

ಮುತ್ತಗೋಡು ಆನೆ ಬಿಡಾರದಿಂದ 2 ಆನೆ, ದುಬಾರೆ ಕ್ಯಾಂಪಿನಿಂದ 3 ಆನೆಯನ್ನು ಜಾಗರೂಕತೆಯಿಂದ ಲಾರಿಯಲ್ಲಿ ಕರೆತರಲಾಗಿ. ಇಂದು ಬೇಲೂರು ತಾಲೂಕಿನ ಅಲದಹಳ್ಳಿ‌ ಬಳಿ ಪತ್ತೆ ಹಚ್ಚಿದ ಬಳಿಕ ಸಾಕಾನೆಗಳ ಸಹಾಯದಿಂದ ಪಳಗಿಸಲಾಯಿತು ;ಈ ನಡುವೆ ಅಭಿಮನ್ಯು ಜೊತೆ ಕಾಳಗಕ್ಕೆ ಇಳಿದ ಏಕದಂತ ಒಂಟಿ‌ಸಲಗಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚು ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಪುಂಡ ಒಂಟಿ‌ ಸಲಗವನ್ನು ಸೆರೆ ಹಿಡಿಯಲಾಯಿತು.

ನಗರಕ್ಕೆ ಪ್ರವೇಶಿಸಿ ತೊಂದರೆ ಕೊಡುತ್ತಿರುವ ಏಕದಂತ ಹೊಂದಿರುವ ಒಂದು ಕಾಡಾನೆ ಹಿಡಿಯಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹಾಗೂ ಇಂದು‌ ನಡೆದ ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು

Facebook Comments