ಇಎಂಐ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಮನ್ನಾ ನಿರ್ಧಾರಕ್ಕೆ ಸುಪ್ರೀಂ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.12- ಕೊರೊನಾ ವೈರಸ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ವಿವಿಧ ಸಾಲಗಳ ಮೇಲಿನ ಮಾಸಿಕ ಕಂತು(ಇಎಂಐ) ಪಾವತಿ ವಿನಾಯ್ತಿ ಅವಧಿಯನ್ನು ಆಗಸ್ಟ್ 31ರವರೆಗೆ 6 ತಿಂಗಳ ಕಾಲ ವಿಸ್ತರಿಸಿದೆ.

ಇದೇ ವೇಳೆ ಈ ಅವಧಿಯಲ್ಲಿ ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರು ಪಡೆದಿರುವ ಸಾಲಗಳ ಮೇಲಿನ ಇಎಂಐಗಳಿಗೆ ವಿಧಿಸಿರುವ ಬಡ್ಡಿಯನ್ನು ಮನ್ನಾ ಮಾಡುವ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಇಎಂಐ ಪಾವತಿ ವಿನಾಯ್ತಿ ವಿಸ್ತರಣೆ ಅವಧಿಯಲ್ಲೂ ಅನೇಕ ಬ್ಯಾಂಕ್‍ಗಳು ಬಡ್ಡಿ ವಿಧಿಸಿರುವುದರಿಂದ ಅನೇಕ ಗ್ರಾಹಕರು ಮತ್ತು ಸಾಲಗಾರರು ಕಿರಿಕಿರಿ ಅನುಭವಿಸಿದ್ದು, ಈ ಸಂಬಂಧ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಇಂದು ಈ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಖೌಲ್ ಮತ್ತು ಎಂ.ಆರ್.ಷಾ ಅವರನ್ನೊಳಗೊಂಡ ಪೀಠವು ಇಎಂಐ ವಿಸ್ತರಣೆ, ವಿನಾಯ್ತಿ ವೇಳೆ ಬಡ್ಡಿ ಮನ್ನಾ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‍ಬಿಐಗೆ ಸೂಚನೆ ನೀಡಿದೆ.

ಈ ಸಂಬಂಧ ಇನ್ನು ಮೂರು ದಿನಗಳೊಳಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಬ್ಯಾಂಕ್‍ಗಳು ಮತ್ತು ಗ್ರಾಹಕರಿಗೆ ಗೊಂದಲವಾಗದ ರೀತಿಯಲ್ಲಿ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು ಸೂಚಿಸಿದೆ.

Facebook Comments