ಖಾಲಿ ಸಿರಂಜ್ ಚುಚ್ಚಿ ಲಸಿಕೆ ನೀಡುವಂತೆ ನಾಟಕವಾಡಿದ ನರ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಚಾಪ್ರಾ, ಜೂ. 25- ಲಸಿಕೆ ಇಲ್ಲದ ಖಾಲಿ ಸಿರಂಜ್ ಚುಚ್ಚುವ ಮೂಲಕ ನರ್ಸ್ ಒಬ್ಬರು ಅಜಾಗರೂಕತೆ ಮೆರೆದಿರುವ ಘಟನೆ ಬಿಹಾರದ ಚಾಪ್ರಾದಲ್ಲಿ ನಡೆದಿದೆ. ಖಾಲಿ ಸಿರಿಂಜ್ ಚುಚ್ಚಿರುವ ದೃಶ್ಯಗಳು ಈಗ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿವೆ. ಜೂನ್ 21 ರಂದು ಈ ಪ್ರಮಾದ ನಡೆದಿದ್ದು, ಚಾಪ್ರಾದ ಬಾಡಾ ಇಮಾಮ್‍ಬಾರಾ ಪ್ರದೇಶದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಲಸಿಕೆ ಹಾಕಿಸಿಕೊಳ್ಳಲು ಅಪಾರ ಜನಸಂದಣಿ ಏರ್ಪಟ್ಟಿತ್ತು. ಈ ವೇಳೆ ಯುವಕನೊಬ್ಬ ತಾನು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುವಂತೆ ಸೂಚಿಸಿದ್ದನು. ಅದರಂತೆ ಆತ ಲಸಿಕೆ ಪಡೆದ ದೃಶ್ಯವನ್ನು ಸೆರೆ ಹಿಡಿಯುವಾಗ ನರ್ಸ್ ಮಾಡಿರುವ ಪ್ರಮಾದ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸರನ್ ಜಿಲ್ಲೆಯ ರೋಗ ನಿರೋಧಕ ಅಧಿಕಾರಿ ಡಾ.ಅಜಯ್‍ಕುಮಾರ್ ಅವರು ನರ್ಸ್ ಚಂದನಾ ಕುಮಾರಿ (48)ಗೆ ಘಟನೆ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದಾರೆ. ಖಾಲಿ ಸಿರಿಂಜ್‍ನಿಂದ ಲಸಿಕೆ ಪಡೆದ ಅಜರ್ ಎಂಬುವವರು ಅಜಾಗರೂಕತೆ ಮೆರೆದಿರುವ ನರ್ಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾನೆ.

ದೇಶದ ಹಲವು ಕಡೆ ಕೊರೊನಾ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿರುವಾಗ ಇನ್ನೂ ಕೆಲವು ಇಂತಹ ಕೆಲವು ನರ್ಸ್‍ಗಳ ಅವಿವೇಕತನದಿಂದಾಗಿ ಜನರು ಲಸಿಕೆ ಪಡೆಯಲು ವಂಚಿತರಾಗುತ್ತಿರುವುದು ನಿಜಕ್ಕೂ ದುಸ್ತರವೇ ಸರಿ.

Facebook Comments