ಮುಸ್ಲಿಂ ರಾಷ್ಟ್ರಗಳ ರಂಜಾನ್ ಸಂಭ್ರಮ ಕಸಿದ ಕಿಲ್ಲರ್ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್/ರಿಯಾದ್, ಮೇ 24-ಈದ್-ಉಲ್-ಫಿತರ್ ವಿಶ್ವದ ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರ ಹಬ್ಬ. ಆದರೆ ಕಿಲ್ಲರ್ ಕೊರೊನಾ ಅಟ್ಟಹಾಸ ದೇಶಾದ್ಯಂತ ತೀವ್ರಗೊಂಡಿರುವುದರಿಂದ ಮುಸ್ಲಿಂ ರಾಷ್ಟ್ರಗಳಲ್ಲಿ ಈದ್ ಸಡಗರ-ಸಂಭ್ರಮದ ಮೇಲೆ ಕರಾಳ ನೆರಳು ಅವರಿಸಿದೆ.

ಅರಬ್ ರಾಷ್ಟ್ರಗಳು, ಕೊಲ್ಲಿ ಪ್ರಾಂತ್ಯಗಳು, ಏಷ್ಯಾ, ಯುರೋಪ್, ಆಫ್ರಿಕಾ ಕಂಡಗಳೂ ಸೇರಿದಂತೆ ಮುಸ್ಲಿಂ ಪ್ರಾಬಲ್ಯ ದೇಶಗಳಲ್ಲಿ ರಂಜಾನ್ ನೀರಸವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೆಷ್ಯಾ, ಮಲೇಷ್ಯಾ, ಆಫ್ಘಾನಿಸ್ತಾನ, ಸೌದಿ ಅರೇಬಿಯಾ, ಯುಎಇ, ಯೆಮೆನ್, ಲೆಬನಾನ್, ಕುವೈತ್, ಒಮನ್, ಅಲ್ಬೇನಿಯಾ, ಕತಾರ್, ಬಹರೈನ್, ಇರಾನ್, ಇರಾಕ್, ಈಜಿಪ್ಟ್, ಮೊರೊಕ್ಕೋ, ಟರ್ಕಿ, ಉಜ್ಬೀಕಿಸ್ತಾನ, ನೈಜೀರಿಯಾ, ಅಲ್ಜೀರಿಯಾ, ಸೂಡಾನ್, ಮಾಲಿ,

ಸಿರಿಯಾ, ಕಝಕ್‍ಸ್ತಾನ, ಸೆನೆಗಲ್, ಸೋಮಾಲಿಯಾ, ಬುರ್ಕಿನಾ ಫಾಸೋ, ಜೋರ್ಡಾನ್, ಅಜರ್‍ಬೈಜಾನ್, ತಜಕಿಸ್ತಾನ, ಲಿಬಿಯಾ, ಟುರ್ಕ್‍ಮೆನಿಸ್ತಾನ, ಕಿರ್ಜಿಸ್ತಾನ್, ಮಾಲ್ಡಿವ್ಸ್ ಮೊದಲಾದ ಮುಸ್ಲಿಂ ಪ್ರಾಬಲ್ಯದ ದೇಶಗಳಲ್ಲಿ ಈದ್ ಸಡಗರವನ್ನು ಕೋವಿಡ್ ವೈರಸ್ ಕಸಿದುಕೊಂಡಿದೆ.

ಸಾಮೂಹಿಕ ಪ್ರಾರ್ಥನೆಯನ್ನು ನಿಷೇಸಿರುವುದರಿಂದ ಮುಸ್ಲಿಮರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

Facebook Comments

Sri Raghav

Admin