ರೊಮೇನಿಯಾದಲ್ಲಿ ಯಶಸ್ವಿಯಾಗಿ ಹಾರಾಡಿತು ಮಾದರಿ ‘ಹಾರುವ ತಟ್ಟೆ’..!

ಈ ಸುದ್ದಿಯನ್ನು ಶೇರ್ ಮಾಡಿ

ರೊಮೇನಿಯಾ, ಜೂ.17- ಫ್ಲೈಯಿಂಗ್ ಸಾಸರ್‍ಗಳು ಈ ಶತಮಾನದ ಪರಮ ರಹಸ್ಯಗಳು. ಆಧುನಿಕ ಜಗತ್ತಿನ ಅತ್ಯುನ್ನತ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಿಳುವಳಿಕೆಗಳಿಗೂ ಈ ಒಗಟು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ.

ಇವುಗಳ ಅಸ್ತಿತ್ವ ನಿಜ ಎಂಬುದನ್ನು ತೀರ್ಮಾನಿಸಲು ಸಾಧ್ಯವಾಗುವ ಸಂಶೋಧನೆಗಳು ನಡೆದಿರುವುದೇ ಮಹತ್ ಸಾಧನೆ ಎನ್ನಬಹುದು. ಇದಕ್ಕೆ ಇಂಬು ನೀಡುವಂತೆ ರೊಮೇನಿಯಾ ಎಂಜಿನಿಯರ್‍ಗಳು ಹಾರುವ ತಟ್ಟೆಯನ್ನು ನಿರ್ಮಿಸಿದ್ದಾರೆ.

ರೊಮೇನಿಯಾದಲ್ಲಿ ಹಾರುವ ತಟ್ಟೆಯಂಥ ಯಂತ್ರವೊಂದರ ಪ್ರೋಟೋಟೈಪ್ ನಿರ್ಮಿಸಲಾಗಿದೆ. ಈ ಪುಟ್ಟ ಮಾದರಿಯ ಫ್ಲೈಯಿಂಗ್ ಸಾಸರ್ ಸೃಷ್ಟಿಸಲು ಹತ್ತು ವರ್ಷ ಬೇಕಾಯಿತು. ಅಪರಿಚಿತ ಹಾರುವ ವಸ್ತು-ಯುಎಫ್‍ಒನನ್ನು ಹೋಲುವ ಈ ಫ್ಲೈಯಿಂಗ್ ಸಾಸರ್‍ನ ಮೊದಲ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ.

ಈ ಹಾರುವ ತಟ್ಟೆಗೆ ಎಡಿಐಎಫ್‍ಒ ಎಂದು ಹೆಸರಿಡಲಾಗಿದೆ. ಅಲ್ ಡೈರೆಕ್ಷನಲ್ ಫ್ಲೈಯಿಂಗ್ ಅಬೆಕ್ಟ್ ಎಂಬುದು ಇದರ ಅರ್ಥ. ಈ ಹಾರುವ ತಟ್ಟೆಯ ಪುಟ್ಟ ಮಾದರಿ ತನ್ನ ದಿಕ್ಕು ಮತ್ತು ಪಥವನ್ನು ಅಂತರಿಕ್ಷದಲ್ಲೇ ಯಾವುದೇ ಕೋನಕ್ಕೆ ಬದಲಿಸುವ ಸಾಮಥ್ರ್ಯ ಹೊಂದಿದೆ. ಅಲ್ಲದೇ ಇದು ತಲೆಕೆಳಗಾಗಿ ಸಹ ಹಾರುತ್ತದೆ.

ಹಲವು ವರ್ಷಗಳ ನಿರಂತರ ಅಧ್ಯಯನ ಮತ್ತು ಸಂಶೋಧನೆಯ ಫಲ ಇದು. ಇದರ ಸೃಷ್ಟಿಕರ್ತರು ಡಾ. ಲೊಸಿಫ್ ಟಪೋಸು. ಏರೋಡೈನಾಮಿಕ್ಸ್ ಸಂಶೋಧಕರಾದ ಇವರು ಇದನ್ನು ವಿಶಿಷ್ಟವಾಗಿ ನವೀನ ತಂತ್ರಜ್ಞಾನದೊಂದಿಗೆ ಸೃಷ್ಟಿಸಿದ್ದಾರೆ.

2007ರಲ್ಲಿ ಇದನ್ನು ಮರದ ಮಾದರಿಯಲ್ಲಿ ನಿರ್ಮಿಸಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ನಂತರ ಸತತ ಪರಿಶ್ರಮದಿಂದ ಈ ಪ್ರೋಟೋಟೈಪ್ ಹಾರುವ ತಟ್ಟೆಗೆ ಸ್ಪಷ್ಟ ರೂಪ ನೀಡಲಾಗಿದೆ.

ಇದು ಸಮರ್ಥವಾಗಿ ಹಾರಲು ರೋಟರ್‍ಗಳನ್ನು ಅಳವಡಿಸಲಾಗಿದೆ. ಟಪೋಸು ಅವರ ಸ್ನೇಹಿತ ಮತ್ತು ಎಂಜಿನಿಯರ್ ರಜ್ವಾನ್ ಸೋಬಿ ಈ ಯೋಜನೆಗೆ ಸಾಥ್ ನೀಡಿದ್ದಾರೆ. ಸ್ವಿಡ್ಜರ್‍ಲೆಂಡ್‍ನ ಜಿನಿವಾದಲ್ಲಿ ನಡೆದ ವಾರ್ಷಿಕ ಅನ್ವೇಷಣೆಗಳ ವಸ್ತು ಪ್ರದರ್ಶನದಲ್ಲಿ ಈ ಹಾರುವ ತಟ್ಟೆಗೆ ಬಹುಮಾನ ಲಭಿಸಿದೆ.

Facebook Comments

Sri Raghav

Admin