ಮಾರ್ಗನ್ ಕಾರ್ಯತಂತ್ರಕ್ಕೆ ಮಣಿದ ಆಸೀಸ್, ಸರಣಿ ಸಮ ಬಲ

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಂಚೆಸ್ಟರ್ಡ್,ಸೆ.14- ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆಂಗ್ಲ ಪಡೆ ನಾಯಕ ಮಾರ್ಗನ್ ಅವರ ಕಾರ್ಯತಂತ್ರಕ್ಕೆ ಮಣಿದ ಆಸೀಸ್ ಪಡೆ 24ರನ್‍ಗಳ ಅಂತರದಿಂದ ಸೋಲು ಕಂಡಿದೆ.  ಮೊದಲ ಏಕದಿನ ಪಂದ್ಯವನ್ನು ಗೆದ್ದು ಬೀಗಿದ ಆಸ್ಟ್ರೀಯಾಗೆ ನಿಜವಾದ ಎದುರೇಟು ನೀಡಿರುವ ಇಂಗ್ಲೆಂಡ್ ಈಗ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮ ಬಲ ಸಾಧಿಸಿದ್ದು, ಬುಧವಾರ ನಡೆಯಲಿರುವ ಫೈನಲ್ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

ಬೌಲರ್‍ಗಳಿಗೆ ನೆರವಾಗಿದ್ದ ಪಿಚ್‍ನಲ್ಲಿ ಬ್ಯಾಟ್ಸ್‍ಮನ್‍ಗಳು ರನ್‍ಗಳಿಸಲು ಪರದಾಡಿದಂತಹ ಕ್ಷಣಗಳನ್ನು ವೀಕ್ಷಿಸಿದ ಪ್ರೇಕ್ಷಕರು ಕೊನೆಯಲ್ಲಿ ರೋಚಕ ಕ್ಷಣಗಳ ಆನಂದ ಅನುಭವಿಸಿ ಪುಳಕಿತರಾದರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿದರೂ ಚೇತರಿಕೆ ತಂದುಕೊಟ್ಟಿದ್ದು ಮಾತ್ರ ನಾಯಕ ಮಾರ್ಗನ್ ಮತ್ತು ರೂಟ್ ಜೋಡಿ.

ಆದರೂ 150ರನ್ ಕಲೆ ಹಾಕುವಷ್ಟರಲ್ಲಿ ಪ್ರಮುಖ 8 ವಿಕೆಟ್‍ಗಳನ್ನು ಕಳೆದುಕೊಂಡು ಕನಿಷ್ಠ ಮೊತ್ತ ಕಲೆ ಹಾಕುವ ಸಾಧ್ಯತೆಯನ್ನು ನಿರೀಕ್ಷಿಸಿದ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ಬದಲಿಸಿದ ರಷೀದ್ ಮತ್ತು ಖಾರನ್ ಜೊಡಿ ಉಪಯುಕ್ತ ಆಟದ ನೆರವಿನಿಂದ ಕೊನೆಗೆ 50 ಓವರ್‍ಗಳಲ್ಲಿ 231ರನ್ ಕಲೆ ಹಾಕುವಲ್ಲಿ ಯಶ್ವಿಯಾಗಿ ಆಸೀಸ್ ಪಾಳ್ಯಕ್ಕೆ ತಿರುಗೇಟು ನೀಡಿದರು.

ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಫಿಂಚ್ ಹಾಗೂ ವಾರ್ನರ್ ಜೋಡಿ ಆರಂಭದಲ್ಲೇ ಅಬ್ಬರಿಸಿದರೂ ಇಂಗ್ಲೆಂಡ್‍ನ ಮಧ್ಯಮ ಕ್ರಮಾಂಕದ ವೇಗಿಗಳದ ಆರ್ಚರ್ ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ವಿಯಾದರು.

ನಂತರ ಬಂದ ಸ್ಟೋನಿಸ್ ಕೂಡ ಕೇವಲ 9 ರನ್‍ಗಳಿಗೆ ನಿರ್ಗಮಿಸಿದ ನಂತರ ಫಿಂಚ್‍ಗೆ ಜತೆಯಾದ ಲ್ಯಾಬರ್ಸ್ ಗೇನ್ ಅದ್ಭುತ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿತ್ತ ಎಳೆದರು. ಆದರೆ, ನಾಟಕೀಯ ತಿರುವು ಪಡೆದ ಪಂದ್ಯ ಆಂಗ್ಲ ಪಡೆ ನಾಯಕ ಮಾರ್ಗನ್ ಅವರ ಚಮತ್ಕಾರಿ ಕಾರ್ಯತಂತ್ರಕ್ಕೆ ಈ ಜೋಡಿ ಎಡವಿತು.

ಒಂದು ಕಡೆ ವಿಕೆಟ್‍ಗಳು ಉರುಳುತ್ತಿದ್ದರೆ ಫಿಂಚ್ ಮಾತ್ರ ತಮ್ಮ ನೈಜ ಆಟವನ್ನು ಪ್ರದರ್ಶಿಸಿ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದರು. ಆದರೆ, ಇಂಗ್ಲೆಂಡ್‍ನ ಬೌಲರ್‍ಗಳ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ರನ್ ಗಳಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಅಂತಿಮ ಕ್ಷಣದಲ್ಲಿ ಆಸ್ಟ್ರೇಲಿಯಾದ ಮಧ್ಯಮ ಹಾಗೂ ಅಂತಿಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಪ್ರತಿರೋಧವನ್ನೇ ತೋರದೆ 48.4 ಓವರ್‍ಗಳಲ್ಲಿ ಕೇವಲ 207 ರನ್ ಗಳಿಸಲು ಮಾತ್ರ ಸಕ್ತವಾಯಿತು. 23 ರನ್‍ಗಳ ಅಂತರದಿಂದ ಇಂಗ್ಲೆಂಡ್ ಜಯ ಸಾಧಿಸಿ ಸರಣಿಯನ್ನು ಇನ್ನೂ ಜೀವಂತವಾಗಿರಿಸುವಲ್ಲಿ ಯಶಸ್ವಿಯಾಯಿತು.

ಈಗಾಗಲೇ ಟಿ20 ಸರಣಿಯನ್ನು ಗೆದ್ದಿರುವ ಇಂಗ್ಲೆಂಡ್ ಏಕದಿನ ಪಂದ್ಯವನ್ನು ಕೂಡ ತನ್ನ ಮುಡುಗೇರಿಸಿಕೊಳ್ಳಲು ಆತೊರಿಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 6-7 ತಿಂಗಳುಗಳಿಂದ ಅಭ್ಯಾಸದಿಂದ ದೂರ ಉಳಿದಿ ಏಕಾಏಕಿ ಪಂದ್ಯಾವಳಿಗೆ ಬಂದಿಳಿದ ಆಸ್ಟ್ರೇಲಿಯಾ ಈಗ ಸೋಲಿನ ರುಚಿ ಕಾಣುತ್ತಿದೆ ಎಂದು ನಾಯಕ ವಾರ್ನರ್ ಹೇಳಿಕೊಂಡಿದ್ದಾರೆ.

Facebook Comments