ಆಸ್ಟ್ರೇಲಿಯಾ ವಿರುದ್ಧ ಆಂಗ್ಲರಿಗೆ ರೋಚಕ ಜಯ

ಈ ಸುದ್ದಿಯನ್ನು ಶೇರ್ ಮಾಡಿ

ಸೌಂತ್ ಅಂಪೈರ್, ಸೆ.5- ಇಲ್ಲಿ ನಡೆದ ರೋಚಕ ಟಿ-20 ಕ್ರಿಕೆಟ್ ಹಣಾಹಣಿಯಲ್ಲಿ ಎರಡು ರನ್‍ಗಳ ಅಂತರದಿಂದ ಇಂಗ್ಲೆಂಡ್ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162ರನ್ ಕಲೆ ಹಾಕಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸಿಸ್‍ನ ಆರಂಭಿಕ ಆಟಗಾರರಾದ ವಾರ್ನರ್ ಮತ್ತು ಪಿಂಚ್ ಜೋಡಿ ಆರ್ಭಟದ ಬ್ಯಾಟಿಂಗ್‍ನಿಂದ ತಂಡ ಗೆಲುವಿನತ್ತ ಮುನ್ನುಗ್ಗಿತ್ತು. ಆದರೆ ಕೊನೆಯ ಹಂತದಲ್ಲಿ ಇವರಿಬ್ಬರ ವಿಕೆಟ್ ಉರುಳಿದ ನಂತರ ಹಿಡಿತ ಸಾಧಿಸಿದ ಇಂಗ್ಲೆಂಡ್ ಪಂದ್ಯವನ್ನು ಗೆದ್ದುಕೊಂಡಿದೆ.

Facebook Comments