ದೇಶದ್ರೋಹಿಗಳನ್ನು ಹೆಡೆಮುರಿಕಟ್ಟುವಂತೆ ಪ್ರಧಾನಿ ಮೋದಿ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೇವಾಡಿಯಾ,ಅ.20- ದೇಶದ್ರೋಹಿಗಳು ಹೊರ ದೇಶಗಳನ್ನು ಸುರಕ್ಷಿತ ತಾಣಗಳನ್ನಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಜಾಗೃತ ದಳ ಹಾಗೂ ಸಿಬಿಐಗೆ ಸೂಚನೆ ನೀಡಿದ್ದಾರೆ. ಗುಜರಾತ್‍ನ ಕೇವಾಡಿಯಾದಲ್ಲಿ ಜಾಗೃತ ದಳ ಮತ್ತು ಸಿಬಿಐ ಹಮ್ಮಿಕೊಂಡಿದ್ದ ಜಂಟಿ ಸಮಾವೇಶವನ್ನು ವರ್ಚುಯಲ್ ಮೂಲಕ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು.

ದೇಶಕ್ಕೆ ಹಾಗೂ ನಾಡಿನ ಪ್ರಜೆಗಳಿಗೆ ಮೋಸ ಮಾಡುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ದೇಶಕ್ಕೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರನ್ನು ಉದ್ದೇಶಿಸಿ ಮೋದಿ ಅವರು ತನಿಖಾ ಸಂಸ್ಥೆಗಳಿಗೆ ಈ ರೀತಿಯ ಕರೆ ನೀಡಿರುವುದು ಉಲ್ಲೇಖಾರ್ಹ.

ನೀವು ಈ ಮಣ್ಣು ಹಾಗೂ ಭಾರತಾಂಬೆಯ ಋಣ ತೀರಿಸಬೇಕಾದರೆ ಮಾತೃಭೂಮಿಗೆ ವಂಚನೆ ಮಾಡಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವವರ ಹೆಡೆಮುರಿ ಕಟ್ಟಿ ತರಬೇಕು ಎಂದು ಅವರು ತನಿಖಾಕಾರಿಗಳನ್ನು ಹುರಿದುಂಬಿಸಿದರು. ಕಳೆದ ಆರೇಳು ವರ್ಷಗಳಿಂದ ಭ್ರಷ್ಟಾಚಾರ ತಡೆಗೆ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡ ಪರಿಣಾಮ ದೇಶದಲ್ಲಿ ಇತ್ತಿಚೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದು ಅವರು ಸ್ಮರಿಸಿಕೊಂಡರು.

ಆದರೆ, ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳು ಭ್ರಷ್ಟಾಚಾರ ನಿಯಂತ್ರಣಕ್ಕೆ ವಿಫಲವಾಗಿದ್ದ ಹಿನ್ನಲೆಯಲ್ಲಿ ಹಲವಾರು ಭ್ರಷ್ಟರು ದೇಶ ಲೂಟಿ ಮಾಡಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಕಾರಕ್ಕೆ ಬಂದವರು ದೇಶದ ನಿಯಂತ್ರಣವನ್ನು ತಮ್ಮ ಕುಟುಂಬದಲ್ಲೇ ಇರಿಸಿಕೊಂಡಿದ್ದ ಪರಿಣಾಮ ಹಲವಾರು ವಂಚನೆ ಪ್ರಕರಣಗಳು ನಡೆದಿವೆ ಎನ್ನುವುದನ್ನು ಯಾರು ಮರೆಯಬಾರದು ಎಂದು ಅವರು ಹೇಳಿದರು.

Facebook Comments