ಸ್ಫೋಟದ ತೀವ್ರತೆ ಬಗ್ಗೆ ತಜ್ಞರು ತನಿಖೆ ನಡೆಸಲಿದ್ದಾರೆ : ಸಚಿವ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಜ.22- ಕಲ್ಲು ಕ್ವಾರಿ ಸ್ಫೋಟದ ತೀವ್ರತೆ ಬಗ್ಗೆ ಬೆಂಗಳೂರು ತಜ್ಞರು ತನಿಖೆ ನಡೆಸಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ವಾರಿ ಸಕ್ರಮವಾಗಿದ್ದರೆ ಸ್ಫೋಟ ಸಂಭವಿಸಿದಾಗ ಭಾರೀ ಸದ್ದು ಬರುತ್ತಿರಲಿಲ್ಲ. ಆದರೆ ನಿನ್ನೆ ರಾತ್ರಿ ಸಂಭವಿಸಿದ್ದ ಸ್ಫೋಟದ ತೀವ್ರತೆ 100 ಕಿ.ಮೀ. ದೂರದವರೆಗೂ ಕೇಳಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಬೆಂಗಳೂರಿನಿಂದ ನುರಿತ ತಜ್ಞರು ಆಗಮಿಸಿ ಸ್ಫೋಟದ ತೀವ್ರತೆ ಹೆಚ್ಚಳದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ತಜ್ಞರ ತನಿಖೆ ನಂತರವಷ್ಟೇ ಸ್ಫೋಟದ ತೀವ್ರತೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದರು.ಇದುವರೆಗೂ ಸ್ಫೋಟಕ್ಕೆ ಕೇವಲ ಇಬ್ಬರು ಮಾತ್ರ ಮೃತಪಟ್ಟಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದರು.

Facebook Comments