ಸಿದ್ದರಾಮಯ್ಯರನ್ನು ‘ವಡ್ಡ’ ಎಂದ ಈಶ್ವರಪ್ಪಗೆ ತಟ್ಟಿತು ಪ್ರತಿಭಟನೆ ಬಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.22- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅವರ ನಾಯಕರ ಮಾತುಗಳನ್ನ ಯಾರು ಕೇಳುತ್ತಿಲ್ಲ, ಕಾಂಗ್ರೆಸ್‍ನಲ್ಲಂತು ವಿರೋಧ ಪಕ್ಷದ ನಾಯಕರು ಯಾರು ಎಂದೇ ಗೊತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಯಾರು ಯಾರ ಮಾತನ್ನು ಕೇಳದ ಸ್ಥಿತಿ ಉಂಟಾಗಿದೆ. ಸರ್ಕಾರ ರಚನೆಯಾಗಿ ಇಷ್ಟು ದಿನಗಳಾದರು ಕಾಂಗ್ರೆಸ್‍ನಲ್ಲಿ ವಿಪಕ್ಷ ನಾಯಕರನ್ನು ನೇಮಿಸಿಲ್ಲ ಎಂದರು.

ಈಗ ಪಕ್ಷ ಬಿಟ್ಟವರ ಬಗ್ಗೆ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ. ಅಂತಹ ಕೇಳ್ತಾ ಇದ್ದರಲ್ಲವ, ಹಿಂದೆ ಅವರು ಪಕ್ಷಾಂತರ ಮಾಡಿ ಚುನಾವಣೆಗೆ ಹೋಗಿದ್ದರಲ್ಲ, ಅವತ್ತು ಹೇಗೆ ಎದುರಿಸಿದರಂತೆ ಮೊದಲು ಅದನ್ನು ಹೇಳಬೇಕು. ಆ ಮೇಲೆ ಬೇರೆಯವರ ಬಗ್ಗೆ ಮಾತನಾಡಿಲಿ ಎಂದು ಹೇಳಿದರು.

ಉಪಚುನಾವಣೆಯ ಎಲ್ಲ 17 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ಯಾವುದೇ ಅನುಮಾನ ಬೇಡ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರಿಗೆ ಮೊದಲ ಆದ್ಯತೆಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಸಂತ್ರಸ್ತರ ನೆರವಿಗಾಗಿ ನೀತಿ ಸಂಹಿತೆಯನ್ನು ಸಡಿಲುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತೇವೆ ಎಂದು ಹೇಳಿದರು.

# ಈಶ್ವರಪ್ಪಗೆ ಪ್ರತಿಭಟನೆ ಬಿಸಿ :  
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ಇಂದು ಬೆಳಗ್ಗೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಈಶ್ವರಪ್ಪ ಬಂದಾಗ ಭೋವಿ ಸಮಾಜದವರು ಘೇರಾವ್ ಮಾಡಿ ಗೋಬ್ಯಾಕ್ ಈಶ್ವರಪ್ಪ ಎಂದು ಘೋಷಣೆ ಕೂಗಿದರು. ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ವಡ್ಡ ಎಂದು ಈಶ್ವರಪ್ಪ ನಿಂದಿಸಿದ್ದರು.

ವಡ್ಡ ಪದ ಬಳಸಿ ತಮ್ಮ ಜನಾಂಗಕ್ಕೆ ಈಶ್ವರಪ್ಪ ಅವರು ಅಪಮಾನಿಸಿದ್ದಾರೆ. ನಾವು ಕಲ್ಲು ಒಡೆದು ಜೀವನ ಮಾಡುತ್ತೇವೆ. ನಮ್ಮ ಜಾತಿಯ ಹೆಸರು ಬಳಸಿ ಏಕೆ ನಿಂದನೆ ಮಾಡಿದ್ದೀರಾ ಎಂದು ಭೋವಿ ಜನಾಂಗದವರು ಆಕ್ರೋಶ ವ್ಯಕ್ತಪಡಿಸಿದರು. ರಾಕ್ಷಸ ರೂಪದ ಈಶ್ವರಪ್ಪ ಅವರ ಚಿತ್ರ ಹಿಡಿದು ಭೋವಿ ಜನಾಂಗದವರು ಪ್ರತಿಭಟನೆ ನಡೆಸಿದರು.

Facebook Comments