ಕಾಂಗ್ರೆಸ್’ನ್ನು ಖತಂ ಮಾಡಲು ಅಪ್ಪ-ಮಕ್ಕಳು ಪ್ಲಾನ್ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಮೈಸೂರು, ಜೂ.6-ಕಾಂಗ್ರೆಸ್ ಮುಗಿಸಲು ಅಪ್ಪ-ಮಕ್ಕಳು ಸಂಚು ರೂಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಆರೋಪಿಸಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‍ಅನ್ನು ಮುಗಿಸಲು ತಂದೆ-ಮಕ್ಕಳು ಸಂಚು ರೂಪಿಸಿದ್ದಾರೆ. ಇವರ ಈ ಸಂಚಿಗೆ ಕಾಂಗ್ರೆಸ್ ಬಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಹೆಸರನ್ನು ಪ್ರಸ್ತಾಪಿಸದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸಿದ ಯಡಿಯೂರಪ್ಪ, ಬಜೆಟ್ ಮಂಡಿಸುವುದನ್ನು ನಾನು ನೋಡಬೇಕು ಎಂದು ವ್ಯಂಗ್ಯವಾಡಿದರು. ಬೆಂಗಳೂರಿನ ಜಯನಗರ ಹಾಗೂ ವಿಧಾನ ಪರಿಷತ್‍ನಲ್ಲೂ ಹೊಂದಾಣಿಕೆ ರಾಜಕೀಯ ನಡೆದಿದೆ ಎಂದು ಆರೋಪಿಸಿದ ಅವರು, ಯಾವುದೇ ಹೊಂದಾಣಿಕೆ ನಡೆದರೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ ಎಂದು ತಿಳಿಸಿದರು. ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ಹಲವು ಕಡೆ ಹೋಗಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಪ್ರಯಾಣ ರದ್ದು ಮಾಡಿದ್ದೇನೆ. ಇಂದು ಎಲ್ಲೂ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

Facebook Comments

Sri Raghav

Admin