ಜಮೀರ್ ನೆಲ ಹೊರೆಸುವ ಕೆಲಸಕ್ಕೂ ಲಾಯಕ್ಕಿಲ್ಲ: ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮೇ 15-ಸಚಿವ ಜಮೀರ್ ಅಹ್ಮದ್ ಖಾನ್ ಕಳ್ಳನಿದ್ದಂಥೆ ವಾಚ್‍ಮೆನ್ ಡ್ಯೂಟಿಗಲ್ಲ, ಮನೆ ನೆಲ ಹೊರಸುವುದಕ್ಕೂ ಅವನನ್ನು ಇಟ್ಟುಕೊಳ್ಳಬಾರದು ಎಂದು ಬಿಜೆಪಿಯ ಈಶ್ವರಪ್ಪ ಅವರು ವಾಗ್ದಾಳಿ ನಡೆಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಜಮೀರ್ ಅವರ ಬಗ್ಗೆ ಸಮಯ ಸಿಕ್ಕಾಗಲೆಲ್ಲ ಕಿಡಿಕಾರುವ ಈಶ್ವರಪ್ಪ, ಇಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಏಕವಚನದಲ್ಲೇ ವಾಚಾಮಗೋಚರವಾಗಿ ಟೀಕೆ ಮಾಡಿದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ನಾನು ಅವರ ಮನೆಯ ವಾಚ್‍ಮೆನ್ ಆಗುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆತ ಕಳ್ಳ. ಯಡಿಯೂರಪ್ಪ ಅವರು ಜಮೀರ್‍ನನ್ನು ವಾಚ್‍ಮೆನ್ ಆಗಿ ಅಲ್ಲ, ಮನೆ ನೆಲ ಹೊರಿಸುವುದಕ್ಕೂ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡುವುದಾಗಿ ಹೇಳಿದರು.

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ತಲೆ ಕತ್ತರಿಸಿಕೊಳ್ಳುತ್ತೇನೆ, ಅವರ ಮನೆಯಲ್ಲಿ ನೌಕರಿ ಮಾಡುತ್ತೇನೆ ಎಂದು ಜಮೀರ್ ಹೇಳಿಕೆ ನೀಡಿದ್ದರು. ಜೆಡಿಎಸ್‍ನಲ್ಲಿದ್ದಾಗ ದೇವೇಗೌಡರ ಬಳಿ ಚಮಚಾಗಿರಿ ಮಾಡಿ ಸಚಿವರಾಗಿದ್ದರು.

ಸಮ್ಮಿಶ್ರ ಸರ್ಕಾರದಲ್ಲೂ ಅದೇ ರೀತಿ ಚಮಚಾಗಿರಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದಾರೆ. ನಾನು ಯಾವುದೇ ಚಮಚಾಗಿರಿ ಮಾಡುವುದಿಲ್ಲ. ತಪ್ಪು ನಡೆದರೆ ಅದರ ವಿರುದ್ಧ ಮಾತನಾಡುವ ಪಾಠವನ್ನು ಪಕ್ಷ ನನಗೆ ಕಲಿಸಿಕೊಟ್ಟಿದೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ