ಇಎಸ್‍ಐ ಆಸ್ಪತ್ರೆಯಲ್ಲಿ 15 ತಿಂಗಳಿನಿಂದ ಕೊಳೆಯುತ್ತಿದ್ದ ಶವಗಳು : ತನಿಖೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29- ಇಎಸ್‍ಐ ಆಸ್ಪತ್ರೆ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ಕೊಳೆತ ಸ್ಥಿತಿಯಲ್ಲಿದ್ದ ಶವಗಳ ವಿಚಾರ ಬೆಳಕಿಗೆ ಬಂದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಸಚಿವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಈ ಘಟನೆಯ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್‍ಐ ಆಸ್ಪತ್ರೆಯ ಪಾತ್ರ ಗಂಭೀರವಾಗಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್‍ಐ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ 2020ರ ಜುಲೈ ತಿಂಗಳಲ್ಲಿ ಕೋವಿಡ್ 19 ಮೊದಲನೆ ಅಲೆ ಸಂಧರ್ಭದಲ್ಲಿ ಕೋವಿಡ್‍ನಿಂದ ಮೃತಪಟಿದ್ದ ಇಬ್ಬರ ಮೃತ ದೇಹಗಳು ಅಂತ್ಯಸಂಸ್ಕಾರವಿಲ್ಲದೆ ಶವಾಗಾರದಲ್ಲೆ ಕೊಳೆಯುತ್ತಿದ್ದವು ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಇದು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ನಿರ್ದಿಷ್ಟ ವರದಿ ಪಡೆದು ನಿರ್ಲಕ್ಷ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಇಂತಹ ಪ್ರಸಂಗ ಎಲ್ಲಿಯೂ ಜರುಗ ಬಾರದು ಕೋವಿಡ್ ಪರಿಸ್ಥಿತಿಯಲ್ಲಿ ಬೇರೆ ಬೇರೆ ರೀತಿಯ ಕರುಳು ಹಿಂಡುವ ಘಟನೆಗಳನ್ನು ಕೇಳಿದ್ದೆವು. ಆದರೆ ಇಎಸ್‍ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ಧೈವ , ಬೇಜವಾಬ್ದಾರಿತನ, ಅಮಾನವೀಯ ವರ್ತನೆಯ ಪರಾಕಾಷ್ಠೆಯಾಗಿದೆ. ಕೂಡಲೆ ಅಗತ್ಯ ಕ್ರಮ ಕೈಗೊಂಡು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Facebook Comments

Sri Raghav

Admin