ಇಎಸ್‍ಐ ಆಸ್ಪತ್ರೆ ಸಿಬ್ಬಂದಿಗೂ ಸೋಂಕು, ರಾಜಾಜಿನಗರದಲ್ಲಿ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಇಎಸ್‍ಐ ಆಸ್ಪತ್ರೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ರಾಜಾಜಿನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಎದುರಾಗಿದೆ.

ಇಎಸ್‍ಐ ಆಸ್ಪತ್ರೆಯಲ್ಲಿ ಹೌಸ್‍ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಹೌಸ್‍ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಕೆಯ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಕೂಡಲೇ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆಯ ಜತೆ ಸಂಪರ್ಕವಿರಿಸಿಕೊಂಡಿರುವವರ ಪತ್ತೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಂಕಿತ ಮಹಿಳೆ ಇಎಸ್‍ಐ ಆಸ್ಪತ್ರೆಯ ಕೂಗಳತೆ ದೂರದಲ್ಲೇ ವಾಸಮಾಡುತ್ತಿದ್ದು, ಮಹಿಳೆಯಿಂದ ಎಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನುವ ಲೆಕ್ಕಾಚರದಲ್ಲಿ ತೊಡಗಿದ್ದಾರೆ ಆಧಿಕಾರಿಗಳು.

# ಸೋಮವಾರ ಡೇಂಜರ್  ಆಗಲಿದೆಯಾ ?:  ಇಂದು ಸಂಜೆ ವೇಳೆಗೆ 500ಕ್ಕೂ ಹೆಚ್ಚು ಜನರ ಸ್ವಾಬ್ ರಿಪೋರ್ಟ್ ಬರಲಿದ್ದು, ಇನ್ನು ಅದೆಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿದೆಯೋ ಎಂಬ ಭೀತಿ ಶುರುವಾಗಿದೆ.

ಲಾಕ್‍ಡೌನ್ ತೆರವಿನ ನಂತರ ನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಸಂಜೆ ಬರಲಿರುವ ವರದಿಯಲ್ಲಿ ಮತ್ತೆ ನೂರಾರು ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಡೇಂಜರ್ ಮಂಡೆ ಆಗಲಿದೆಯೇ ಎಂಬ ಆತಂಕ ಕಾಡುತ್ತಿದೆ.

Facebook Comments