ಚೀನೀಯರಿಗೂ ಭಾರತದ ಪ್ರಧಾನಿ ಮೋದಿ ಅಚ್ಚುಮೆಚ್ಚು..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಆ.27- ಲಡಾಖ್ ಹಿಂಸಾಚಾರದ ನಂತರ ಚೀನಾದ ಕಂಪನಿಗಳು ಭಾರತ ಸರ್ಕಾರದ ಹಿಟ್‍ಲಿಸ್ಟ್‍ನಲ್ಲಿವೆ. ಚೀನಾದ ಕಂಪನಿಗಳೊಂದಿಗಿನ ಸಂಬಂಧವನ್ನು ಹಂತಹಂತವಾಗಿ ಕೊನೆಗೊಳಿಸಲು ಮುಂದಾಗಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಚೀನಿಯರು ಅಪಾರ ಅಭಿಮಾನ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಕರೊನಾ ವೈರಸ್ ಹಾಗೂ ಲಡಾಖ್ ಗಡಿ ವಿವಾದದ ನಂತರ ತಿರಸ್ಕರಿಸಲ್ಪಟ್ಟಿರುವ ಚೀನಾದಲ್ಲಿನ ಜನರು ಕೂಡ ಮೋದಿ ಅವರನ್ನೇ ಹೆಚ್ಚು ಪ್ರೀತಿಸುತ್ತಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದು ತಿಳಿಸಿದೆ.
ಸಮೀಕ್ಷೆಯ ಪ್ರಕಾರ 50 ಪ್ರತಿಶತದಷ್ಟು ಚೀನಾದ ನಾಗರಿಕರು ಬೀಜಿಂಗ್ ಮೇಲೆ ಅನುಕೂಲಕರ ಪ್ರಭಾವವನ್ನು ಹೊಂದಿದ್ದರೆ, ಪ್ರತಿಶತ 50ರಷ್ಟು ಮಂದಿ ಮೋದಿ ನೇತೃತ್ವದ ಸರ್ಕಾರವನ್ನು ಮನತುಂಬಿ ಹೊಗಳಿದ್ದಾರೆ.

ಭಾರತದಲ್ಲಿ ಚೀನಾ ವಿರೋ ಭಾವನೆ ತುಂಬಾ ಹೆಚ್ಚಾಗಿದೆ ಎಂದು ಶೇಕಡಾ 70 ರಷ್ಟು ಜನರು ನಂಬಿದ್ದಾರೆ. ಅದೇ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವು ಸುಧಾರಿಸುತ್ತದೆ ಎಂದು ಶೇಕಡಾ 30ರಷ್ಟು ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ-ಚೀನಾ ಸಂಬಂಧದಲ್ಲಿ ಅಲ್ಪಾವಗೆ ಸುಧಾರಣೆಯಾಗಲಿದೆ ಎಂದು ಶೆ.9ರಷ್ಟು ಚೀನಿಯರು ನಂಬಿದ್ದರೆ, ಶೇ.25ರಷ್ಟು ಜನರು ದೇಶಗಳ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸದೃಢವಾಗಿರುತ್ತದೆ ಎಂದು ಭಾವಿಸಿದ್ದಾರೆ.

ಲಡಾಖ್ ಹಿಂಸಾಚಾರದ ನಂತರ ಚೀನಾದ ಕಂಪನಿಗಳು ಭಾರತ ಸರ್ಕಾರದ ಹಿಟ್‍ಲಿಸ್ಟ್‍ನಲ್ಲಿವೆ. ಹುವಾವೇ ಮತ್ತು ಇತರ ಚೀನಾದ ಕಂಪನಿಗಳೊಂದಿಗಿನ ಸಂಬಂಧವನ್ನು ಹಂತಹಂತವಾಗಿ ಕೊನೆಗೊಳಿಸಲು ಭಾರತ ಮುಂದಾಗಿದೆ. ಇದರ ನಡುವೆಯೇ ಚೀನಾದವರು ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಹುವಾವೆ ಕುರಿತು ಹೇಳುವುದಾದರೆ, ಇದು ಈಗಾಗಲೇ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‍ಡಮ್ ಮತ್ತು ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ನಿಷೇಧವನ್ನು ಎದುರಿಸುತ್ತಿದೆ.

ಹುವಾವೇ ಸಿಎಫ್‍ಒ ಮೆಂಗ್ ವೆನ್ ಝೌ ಕೆನಡಾದಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರು ಜÁಹೀರಾತುಗಳ ಮೂಲಕ ಭಾರತದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin