“ನಾನು ಅಸ್ಸಾಂ ಸಿಎಂ ಅಭ್ಯರ್ಥಿ ಅಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.24- ನಾನು ರಾಜಕಾರಣಿ ಅಲ್ಲ ಮತ್ತು ಸಕ್ರಿಯ ರಾಜಕೀಯಕ್ಕೆ ಸೇರುವ ಉದ್ದೇಶವೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಾನು ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯೂ ಅಲ್ಲ ಎಂದು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಲವರು ನಾನು ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸುತ್ತಿದ್ದಾರೆ. ಇದು ತಪ್ಪು ಕಲ್ಪನೆ ಎಂದು ಹೇಳಿದರು.

ನಾನು ಕಳೆದ ವರ್ಷ ರಾಜ್ಯಸಭೆಗೆ ನಾಮ ನಿರ್ದೇಶನವಾದೆ. ಹಾಗೆಂದ ಮಾತ್ರಕ್ಕೆ ನಾನು ಸಕ್ರಿಯ ರಾಜಕೀಯ ರಂಗ ಪ್ರವೇಶಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಸಭೆಗೆ ವಿವಿಧ ಕ್ಷೇತ್ರಗಳಿಂದ ನೇಮಕವಾಗುವ ಮಂದಿಗೂ ಮತ್ತು ರಾಜಕೀಯ ಪಕ್ಷದಿಂದ ಚುನಾಯಿತರಾಗುವ ಜನಪ್ರತಿನಿಗಳಿಗೂ ವ್ಯತ್ಯಾಸವಿದೆ. ಆದರೆ ಕೆಲವರಿಗೆ ಈ ವ್ಯತ್ಯಾಸದ ಬಗ್ಗೆ ಗೊತ್ತಿಲ್ಲ.

ರಾಜ್ಯಸಭೆಯಲ್ಲಿರುವವರೆಲ್ಲರನ್ನು ರಾಜಕೀಯದವರು ಎಂದು ವರ್ಗೀಕರಿಸುತ್ತಾರೆ. ಇದು ತಪ್ಪು ಎಂದು ಅವರು ಹೇಳಿದರು.
ರಾಜ್ಯಸಭೆಗೆ ನೇಮಕವಾಗಲು ನಾನು ಒಪ್ಪಿದ್ದಕ್ಕೆ ರಾಜಕೀಯ ಕಾರಣವಲ್ಲ.

ಸಂಸತ್‍ನಲ್ಲಿ ಸಮಾಜದ ಒಳಿತಿಗಾಗಿ ಮತ್ತು ಜನ ಹಿತಾಸಕ್ತಿಗಾಗಿ ನನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಉದ್ದೇಶದಿಂದ ನಾನು ನಾಮ ನಿರ್ದೇಶನವೇ ಹೊರತು ಯಾವುದೇ ರಾಜಕೀಯ ಪಕ್ಷವನ್ನು ಓಲೈಸುವುದಕ್ಕೆ ಅಲ್ಲ ಎಂದು ರಂಜನ್ ಗೊಗೊಯ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin