ಬಿಜೆಪಿ ಮಾಜಿ ಅಧ್ಯಕ್ಷ ಮಾಂಗೆ ರಾಮ್ ಗರ್ಗ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು. 21- ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನವದೆಹಲಿಯ ಬಿಜೆಪಿ ಮಾಜಿ ಅಧ್ಯಕ್ಷ ಮಾಂಗೆ ರಾಮ್ ಗರ್ಗ್ (82) ಅವರು ಇಂದು ಬೆಳಗ್ಗೆ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗರ್ಗ್ ನವದೆಹಲಿಯ ಬಾಲಾಜಿ ಆ್ಯಕ್ಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಇಂದು ನಿಧನರಾಗಿದ್ದಾರೆ.

ನವದೆಹಲಿಯ ಬಿಜೆಪಿ ಅಧ್ಯಕ್ಷರಾದ ನಂತರ ಗರ್ಗ್ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರಲ್ಲದೆ, ಅವರ ಸಾರಥ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿಯನ್ನು ಸಾಧಿಸಿತ್ತು.

2003ರಲ್ಲಿ ಮೊದಲ ಬಾರಿಗೆ ವಾಜೀಪ್‍ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಗರ್ಗ್ 2008ರಲ್ಲಿ ಕಾಂಗ್ರೆಸ್‍ನ ಹರಿ ಶಂಕರ್ ಗುಪ್ತಾರ ವಿರುದ್ಧ 3 ಸಾವಿರ ಮತಗಳಿಂದ ಸೋಲು ಕಂಡ ನಂತರ ಪಕ್ಷದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಗರ್ಗ್‍ರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ಅಮಿತ್ ಷಾ ಸೇರಿದಂತೆ ಮುಖಂಡರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin